ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಚಿತ್ರಕ್ಕೆ ಕನ್ನಡದ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಾರೆ. ಈ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಮಂಜು ಹಣ ಹಾಕ್ತಾರೆ. ಈ ರೀತಿಯ ಬಿಸಿ ಬಿಸಿ ಸುದ್ದಿಯೊಂದು ಗಾಂಧಿನಗರದ ಗಲ್ಲಿಗಳಲ್ಲಿ ಗಿರಕಿ ಹೊಡೆಯುತ್ತಿದೆ.ಈ ರೂಮರ್ ಹುಟ್ಟಿಕೊಳ್ಳಲು ಕಾರಣ 'ದಬಾಂಗ್-3' ಸೆಟ್ಲ್ಲಿ ಜೋಗಿ ಪ್ರೇಮ್ ಕಾಣಿಸಿಕೊಂಡಿರುವುದು.
ಸಲ್ಮಾನ್ ಚಿತ್ರಕ್ಕೆ ಪ್ರೇಮ್ ಆ್ಯಕ್ಷನ್ ಕಟ್! ಈ ಬಗ್ಗೆ ನಟ ಸುದೀಪ್ ಏನ್ ಹೇಳಿದ್ರು ಗೊತ್ತಾ? - ಪ್ರೇಮ್ ಆ್ಯಕ್ಷನ್
ಸಲ್ಲು ಜತೆ 'ದಬಾಂಗ್-3' ಚಿತ್ರದಲ್ಲಿ ನೆಗೆಟಿವ್ ರೋಲ್ ನಿಭಾಯಿಸುತ್ತಿದ್ದಾರೆ. ಕನ್ನಡಿಗ ಪ್ರಭುದೇವ ನಿರ್ದೇಶನದ ಈ ಚಿತ್ರಕ್ಕೆ ಕಿಚ್ಚ 80 ದಿನಗಳ ಕಾಲ್‌ಶೀಟ್ ಕೊಟ್ಟಿದ್ದಾರೆ.
ಕನ್ನಡದ ಬಚ್ಚನ್ ಸುದೀಪ್ ಬಿಟೌನ್ಲ್ಲಿ ತಮ್ಮ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸಲ್ಲು ಜತೆ 'ದಬಾಂಗ್-3' ಚಿತ್ರದಲ್ಲಿ ನೆಗೆಟಿವ್ ರೋಲ್ ನಿಭಾಯಿಸುತ್ತಿದ್ದಾರೆ. ಕನ್ನಡಿಗ ಪ್ರಭುದೇವ ನಿರ್ದೇಶನದ ಈ ಚಿತ್ರಕ್ಕೆ ಕಿಚ್ಚ 80 ದಿನಗಳ ಕಾಲ್‌ಶೀಟ್ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಚಿತ್ರತಂಡ ಸೇರಿಕೊಂಡಿರುವ ಚಂದನವದ ಆರಡಿ ಕಟೌಟ್, ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಮೊನ್ನೆಯಷ್ಟೆ ಸುದೀಪ್, ಶೂಟಿಂಗ್ನ ಮೊದಲ ದಿನದ ಖುಷಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಪ್ರೇಮ್ ಕೂಡ ದಬಾಂಗ್ ಸೆಟ್ಲ್ಲಿರುವ ಫೋಟೋ ಹಂಚಿಕೊಂಡು ಸುದೀಪ್ ಬಾಲಿವುಡ್ ಜರ್ನಿಗೆ ವಿಶ್ ಮಾಡಿದ್ದರು. ಇದರೊಟ್ಟಿಗೆ ಸಲ್ಲು ಜತೆಗಿರುವ ಕೆಲ ಚಿತ್ರಗಳನ್ನು ಶೇರ್ ಮಾಡಿದ್ದರು. ಈ ಎಲ್ಲ ಲುಕ್ಗಳನ್ನು ನೋಡಿದ ಕೆಲವರು, ದಬಾಂಬ್- 3 ನಲ್ಲಿ ಪ್ರೇಮ್ ಕೂಡ ಅಭಿನಯಿಸಲಿದ್ದಾರೆ ಎಂದು ಮಾತಾಡಿಕೊಂಡಿದ್ದರು. ಅಷ್ಟೇ ಅಲ್ಲ, ಸಲ್ಮಾನ್ ಮುಂದಿನ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಮಾಡಲಿದ್ದಾರೆ ಎಂದು ಸುದ್ದಿ ಪತ್ರಿಕೆಗಳಲ್ಲಿ ಹೆಡ್ಲೈನ್ ಆಗಿತ್ತು. ಆದರೆ, ಈ ಎಲ್ಲ ಅಂತೆಕಂತೆಗಳೆಲ್ಲ ಸುಳ್ಳು ಎಂದಿದ್ದಾರೆ ಸುದೀಪ್.
ನಿನ್ನೆ ತಮ್ಮ ಟ್ವಿಟ್ಟರ್ನಲ್ಲಿ ಸ್ಪಷ್ಟನೆ ನೀಡಿರುವ ಅವರು, 'ಈ ಎಲ್ಲ ಸುದ್ದಿ ಸತ್ಯಕ್ಕೆ ದೂರವಾದವುಗಳು. ತಪ್ಪು ಮಾಹಿತಿ ಹರಡಬೇಡಿ. ಪ್ರೇಮ್, ಸೆಟ್ಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದರಷ್ಟೆ. ಅವತ್ತೇ ಅವರು ವಾಪಸ್ ಆದ್ರು' ಎಂದು ಹೇಳಿ ರೂಮರ್ಗೆ ಫುಲ್ ಸ್ಟಾಪ್ ಹಾಕಿದ್ದಾರೆ.