ದೇಶ, ರಾಜ್ಯ, ನಗರ ಮತ್ತು ಹಳ್ಳಿಗಳಲ್ಲಿ ಕೊರೊನಾ ಎಂಬ ಹೆಮ್ಮಾರಿ ತಾಂಡವವಾಡುತ್ತಿದೆ. ಈ ಹೆಮ್ಮಾರಿಯನ್ನ ಕಟ್ಟಿ ಹಾಕಲು ಆಯಾ ರಾಜ್ಯ ಸರ್ಕಾರಗಳು ಲಾಕ್ಡೌನ್ ಮಾದರಿಯ ಕ್ರಮಗಳ ಮೊರೆ ಹೋಗಿವೆ. ಆದರೂ ಕೊರೊನಾ ಹತೋಟಿಗೆ ಬರುತ್ತಿಲ್ಲ.
ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್‌ಗಾಗಿ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಕೊರೊನಾ ಸೋಂಕಿತರ ಕಷ್ಟಕ್ಕೆ ನಿಂತಿದ್ದಾರೆ.
ಈಗ ಕನ್ನಡದ ನಟರ ಪೈಕಿ ನಟ ಸುದೀಪ್ ಇದೇ ಮೊದಲು ದೊಡ್ಡ ಮಟ್ಟದಲ್ಲಿ ಕೊರೊನಾ ಸೋಂಕಿತರ ನೆರವಿಗೆ ಬಂದಿದ್ದಾರೆ. ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಸರಿಸುಮಾರು 300 ಆಕ್ಸಿಜನ್ ಸಿಲಿಂಡರ್ಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಮೂಲಕ, ಕೊರೊನಾ ಸೋಂಕಿತರ ಸಹಾಯಕ್ಕೆ ಬಂದಿದ್ದಾರೆ.