ಕರ್ನಾಟಕ

karnataka

ETV Bharat / sitara

'ಸಲಗ' ಚಿತ್ರದ 'ಮಳೆಯೇ ಮಳೆಯೇ' ಸಾಂಗ್ ಮೆಚ್ಚಿದ ಸೆಂಚುರಿ ಸ್ಟಾರ್ - salaga film

ನಿರ್ಮಾಪಕ ಕೆ.ಪಿ. ಶ್ರೀಕಾಂತ್ ರೊಮ್ಯಾಂಟಿಕ್ ಹಾಡನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​​ಗೆ ತೋರಿಸಿದ್ದು, ಅದನ್ನು ಮೆಚ್ಚಿಕೊಂಡಿದ್ದಾರೆ‌. ಇನ್ನು ಈ ಕೊರೊನಾ ಎರಡನೇ ಅಲೆ ಬರದೆ ಇದ್ದಿದ್ದರೇ, ಇಷ್ಟು ಹೊತ್ತಿಗೆ ಸಲಗ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದ ಸಲಗ ಸಿನಿಮಾ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ‌.

salaga-film-maleye-song
ಸಾಂಗ್ ಮೆಚ್ಚಿದ ಸೆಂಚುರಿ ಸ್ಟಾರ್

By

Published : Jun 23, 2021, 5:06 PM IST

ಬೆಂಗಳೂರು:ಸ್ಯಾಂಡಲ್​​ವುಡ್​ನಲ್ಲಿ ಟೈಟಲ್ ನಿಂದಲೇ ಸದ್ದು ಮಾಡುತ್ತಿರುವ ಚಿತ್ರ ಸಲಗ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ಅಭಿನಯಿಸುತ್ತಿರೋ ಬಹು ನಿರೀಕ್ಷಿತ ಸಿನಿಮಾ. ಟೀಸರ್ ಹಾಗೂ ಹಾಡುಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಸಲಗ ಚಿತ್ರದ ರೊಮ್ಯಾಂಟಿಕ್ ಹಾಡನ್ನ ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ.

ಸಾಂಗ್ ಮೆಚ್ಚಿದ ಸೆಂಚುರಿ ಸ್ಟಾರ್

ಓದಿ: 'ಮನೀಚೋ'ರರು ದೇಶಕ್ಕೆ ವಂಚಿಸಿದ್ದು 22 ಸಾವಿರ ಕೋಟಿ: ಇದ್ರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಆಸ್ತಿ ಜಪ್ತಿ

ಈ ಹಿಂದೆ ಚಿತ್ರದ ಟೈಟಲ್ ಹಾಡನ್ನ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಶಿವರಾಜ್ ಕುಮಾರ್, ಈಗ ದುನಿಯಾ ವಿಜಯ್ ಹಾಗೂ ಸಂಜನಾ ಆನಂದ್ ನಡುವಿನ ರೊಮ್ಯಾಂಟಿಕ್ ಹಾಡನ್ನ ನೋಡಿ ಫಿದಾ ಆಗಿದ್ದಾರೆ. ಮಲೆನಾಡಿನ ಮಳೆಯ ಸಮಯದಲ್ಲಿ ಚಿತ್ರೀಕರಣವಾಗಿರೋ ಈ ಹಾಡು ನೋಡುಗರನ್ನ ಗಮನ ಸೆಳೆಯುತ್ತಿದೆ.

ಸೆಂಚುರಿ ಸ್ಟಾರ್

ಈ ಹಿನ್ನೆಲೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ರೊಮ್ಯಾಂಟಿಕ್ ಹಾಡನ್ನ ಶಿವರಾಜ್ ಕುಮಾರ್​​ಗೆ ತೋರಿಸಿದ್ದು, ಅದನ್ನು ಮೆಚ್ಚಿಕೊಂಡಿದ್ದಾರೆ‌. ಇನ್ನು ಈ ಕೊರೊನಾ ಎರಡನೇ ಅಲೆ ಬರದೆ ಇದ್ದಿದ್ದರೆ, ಇಷ್ಟು ಹೊತ್ತಿಗೆ ಸಲಗ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದ ಸಿನಿಮಾ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ‌. ಇದೊಂದು ರೌಡಿಸಂ ಜೊತೆಗೆ ಪ್ರೀತಿ ಕಥೆ ಹೊಂದಿರುವ ಚಿತ್ರವಾಗಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದು, ಸಂಚಿತ್ ಹೆಗ್ಡೆ ಹಾಡಿದ್ದಾರೆ.

'ಸಲಗ' ಚಿತ್ರ

ದುನಿಯಾ ವಿಜಯ್, ಸಂಜನಾ ಆನಂದ್, ಡಾಲಿ ಧನಂಜಯ್, ತ್ರಿವೇಣಿ ರಾವ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ. ಟಗರು ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕೊರೊನಾ ಕಡಿಮೆ ಆಗಿ, ಚಿತ್ರಮಂದಿರಗಳು ಓಪನ್ ಆದಮೇಲೆ ಸಲಗ ಚಿತ್ರವನ್ನ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ABOUT THE AUTHOR

...view details