ಕರ್ನಾಟಕ

karnataka

ETV Bharat / sitara

ರಮೇಶ್​​ಗೆ ‘ರಣಗಿರಿ ರಹಸ್ಯ’ ಭೇದಿಸುವ ಸವಾಲು ! - undefined

ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥೆಯ ಶಿವಾಜಿ ಸುರತ್ಕಲ್ ಚಿತ್ರಕ್ಕೆ 'ರಣಗಿರಿ ರಹಸ್ಯ' ಟ್ಯಾಗ್ ಲೈನ್ ನೀಡಲಾಗಿದೆ. ಈ ರಣಗಿರಿಯಲ್ಲಿರುವ ರಹಸ್ಯ ಏನು? ಅದನ್ನು ರಮೇಶ್  ಹೇಗೆ ಭೇದಿಸುತ್ತಾರೆ ಎಂಬುದೇ ಚಿತ್ರದ ಒನ್​ ಲೈನ್ ಸ್ಟೋರಿ.

ಚಿತ್ರಕೃಪೆ ಇನ್​ಸ್ಟಾಗ್ರಾಂ

By

Published : May 11, 2019, 4:01 PM IST

ಸ್ಯಾಂಡಲ್​​​ವುಡ್ ಎವರ್‌ಗ್ರೀನ್ ಹೀರೋ ರಮೇಶ್ ಅರವಿಂದ್ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಡಿಟೆಕ್ಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ್ ಶ್ರೀವಾತ್ಸವ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಬಹುತೇಕ ಕೊನೆಯ ಹಂತ ತಲುಪಿದೆ.

ಈ ವಿಷ್ಯಯವನ್ನು ಟ್ವಿಟರ್​​​​​ನಲ್ಲಿ ಹಂಚಿಕೊಂಡಿರುವ ರಮೇಶ್​​, ಶಿವಾಜಿ ಸುರತ್ಕಲ್ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಈ ಚಿತ್ರದಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸುವಂತ ಪತ್ತೇದಾರಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.

ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥೆಯ ಶಿವಾಜಿ ಸುರತ್ಕಲ್ ಚಿತ್ರಕ್ಕೆ 'ರಣಗಿರಿ ರಹಸ್ಯ' ಟ್ಯಾಗ್ ಲೈನ್ ನೀಡಲಾಗಿದೆ. ಈ ರಣಗಿರಿಯಲ್ಲಿರುವ ರಹಸ್ಯ ಏನು? ಅದನ್ನು ರಮೇಶ್ ಹೇಗೆ ಭೇದಿಸುತ್ತಾರೆ ಎಂಬುದೇ ಚಿತ್ರದ ಒನ್​ ಲೈನ್ ಸ್ಟೋರಿ.

ಇನ್ನು ಚಿತ್ರದಲ್ಲಿ ನಾಯಕಿಯಾಗಿ ರಾಧಿಕಾ ಚೇತನ್ ನಟಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತವಿದ್ದು, ರೇಖಾ ಹಾಗೂ ಅನುಪ್ ಗೌಡ ಬಂಡವಾಳ ಹೂಡಿದ್ದಾರೆ.

For All Latest Updates

TAGGED:

ABOUT THE AUTHOR

...view details