ಕರ್ನಾಟಕ

karnataka

ETV Bharat / sitara

ನೀನಾಸಂ ಸತೀಶ್ ನಟನೆಯ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ರಿಲೀಸ್ - ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ರಿಲೀಸ್

ಶೀರ್ಷಿಕೆಯಿಂದಲೇ ಸಖತ್​ ಸದ್ದು ಮಾಡ್ತಿದ್ದ ನಟ ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ನಟಿಸಿರುವ ಪೆಟ್ರೋಮ್ಯಾಕ್ಸ್​ ಸಿನಿಮಾದ ಟ್ರೈಲರ್​​ ರಿಲೀಸ್ ಆಗಿದೆ.

Ninasam Satish Petromax movie trailer released
ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ರಿಲೀಸ್

By

Published : Sep 20, 2021, 4:48 PM IST

ನಟ ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ನಟಿಸಿರುವ ಪೆಟ್ರೋಮ್ಯಾಕ್ಸ್​ ಸಿನಿಮಾ ಘೋಷಣೆ​ ಆದಾಗಿನಿಂದ ಸಖತ್​ ಸದ್ದು ಮಾಡುತ್ತಿತ್ತು. ಟೈಟಲ್​ನಿಂದಲೇ ಸುದ್ದಿಯಲ್ಲಿದ್ದ ಈ ಚಿತ್ರದ ಟ್ರೈಲರ್​​ ರಿಲೀಸ್ ಆಗಿದೆ.

ಚಿತ್ರದ ಟ್ರೈಲರ್ ಕಾಮಿಡಿ ಕಿಕ್ ಜೊತೆಗೆ ಒಂದು ಗಂಭೀರ ವಿಷಯ ಇದೆ ಅನ್ನೋ ಸುಳಿವು ನೀಡುತ್ತದೆ. ನಿರ್ದೇಶಕ ವಿಜಯ್ ಪ್ರಸಾದ್ ಕಾಮಿಡಿಯಿಂದಲೇ ಮೆಸೇಜ್ ಹೇಳುವ ಪ್ರಯತ್ನ ಮಾಡಿದ್ದಾರೆ. ಟ್ರೈಲರ್​​​ನಲ್ಲಿ ಡಬಲ್ ಮಿನಿಂಗ್ ಸಂಭಾಷಣೆ ಜಾಸ್ತಿ ಅನಿಸಿದರೂ ಪಾತ್ರಗಳಿಗೆ ತಕ್ಕಂತೆ ಇದೆ.

ಸತೀಶ್ ನೀನಾಸಂಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಹಾಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾರುಣ್ಯ ರಾಮ್, ಗೊಂಬೆಗಳ ಲವ್ ಖ್ಯಾತಿಯ ಅರುಣ್, ನಾಗಭೂಷಣ್, ವಿಶೇಷ ಪಾತ್ರದಲ್ಲಿ ವಿಜಯಲಕ್ಷ್ಮೀ ಸಿಂಗ್ ನಟಿಸಿದ್ದಾರೆ.

ಕಥೆ, ಚಿತ್ರಕಥೆ, ಸಂಗೀತ ನಿರ್ದೇಶನ ಅನೂಪ್ ಸೀಳಿನ್, ಕ್ಯಾಮರಾ ನಿರಂಜನ್‌ಬಾಬು, ಸಂಕಲನ ಸುರೇಶ್ ಅರಸ್, ಹೊಸ್ಮನೆ ಮೂರ್ತಿ ಕಲೆ, ವಿನಯ್ ಸಹ ನಿರ್ದೇಶನ ಚಿತ್ರಕ್ಕಿದೆ.

ಬಹುತೇಕ ಚಿತ್ರೀಕರಣ, ಡಬ್ಬಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಪೆಟ್ರೋಮ್ಯಾಕ್ಸ್ ಚಿತ್ರ, ನಿರ್ದೇಶಕ ವಿಜಯ್ ಪ್ರಸಾದ್ ಸಿದ್ಲಿಂಗು, ನೀರ್ ದೋಸೆ ಸಿನಿಮಾದಷ್ಟೇ ಈ ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಿಸುವಂತೆ ಮಾಡಿದೆ‌.

ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಸತೀಶ್ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಸತೀಶ್ ಪಿಕ್ಚರ್ ಹೌಸ್ ಅಡಿ ಬಂಡವಾಳ ಹೂಡಿದ್ದಾರೆ. ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣದಲ್ಲಿ ಜೊತೆಯಾಗಿದೆ. ಚಿತ್ರ ಈ ವರ್ಷದ ಅಂತ್ಯದೊಳಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ABOUT THE AUTHOR

...view details