ಕರ್ನಾಟಕ

karnataka

ETV Bharat / sitara

'ದಸರಾ' ಸಿನಿಮಾದ ಫಸ್ಟ್​​​ ಲುಕ್ ರಿಲೀಸ್​: ಖಡಕ್ ಲುಕ್​​ನಲ್ಲಿ ಎಂಟ್ರಿ ಕೊಟ್ಟ ನಾನಿ - ನಾನಿ ಮುಂದಿನ ಸಿನಿಮಾ ದಸರಾ

ನ್ಯಾಚುರಲ್​ ಸ್ಟಾರ್​ ನಾನಿ ಅಭಿನಯದ 'ದಸರಾ' ಸಿನಿಮಾದ ಫಸ್ಟ್​​​ ಲುಕ್​ನ ವಿಡಿಯೋ ಝಲಕ್​​​ ಬಿಡುಗಡೆಯಾಗಿದೆ. ಚಿತ್ರ ಕನ್ನಡದಲ್ಲೂ ಮೂಡಿ ಬರುತ್ತಿದೆ.

Actor Nani acted Dasara movie first look released
'ದಸರಾ' ಸಿನಿಮಾದ ಫಸ್ಟ್​​​ ಲುಕ್ ರಿಲೀಸ್

By

Published : Mar 21, 2022, 9:36 AM IST

ತೆಲುಗು ಚಿತ್ರರಂಗದ ನ್ಯಾಚುರಲ್​ ಸ್ಟಾರ್​ ನಾನಿ ಅಭಿನಯದ ಮೆಗಾ ಪ್ರಾಜೆಕ್ಟ್ 'ದಸರಾ' ಸಿನಿಮಾದ ಫಸ್ಟ್​​​ ಲುಕ್​ನ ವಿಡಿಯೋ ಝಲಕ್​​​ ಬಿಡುಗಡೆಯಾಗಿದೆ. ವಿಭಿನ್ನ ಕಥೆಯೊಂದಿಗೆ ನಾನಿ ಪ್ರೇಕ್ಷಕರ ಎದುರು ಬರಲಿದ್ದಾರೆ.

ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ದಸರಾ' ಮಾಸ್ ಅಂಡ್ ಆ್ಯಕ್ಷನ್ ಸಿನಿಮಾವಾಗಿದೆ. ಚಿತ್ರ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ. ಸದ್ಯ ಚಿತ್ರದ ಪಸ್ಟ್​​ಲುಕ್​​ ಬಿಡುಗಡೆಯಾಗಿದೆ. ಈ ಕುರಿತಂತೆ ನಾನಿ ಟ್ವಟರ್​​ನಲ್ಲಿ ಫೋಸ್ಟ್​​ ಮಾಡಿದ್ದಾರೆ. ಲುಂಗಿ ತೊಟ್ಟು, ಕೈಯಲ್ಲಿ ಸಿಗರೇಟು ಹಿಡಿದು ಖಡಕ್​​ ಲುಕ್​​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಲಕ್ಷ್ಮೀ ವೆಂಕಟೇಶ್ವರ ಬ್ಯಾನರ್​​​​​​​ನಡಿ ಸುಧಾಕರ್ ಚೆರುಕುರಿ ದಸರಾ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ. ವಿಭಿನ್ನ ಕಥೆಯ ಮೂಲಕ ನಾನಿ ಪ್ಯಾನ್​ ಇಂಡಿಯಾ ಸ್ಟಾರ್​​ ಆಗಿ ಮಿಂಚಲು ಸಿದ್ಧರಾಗಿದ್ದಾರೆ.

ಗೋದಾವರಿ ಖನಿಯಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆಯುವ ಕಥೆಯಲ್ಲಿ ನಾನಿ ಮಾಸ್ ಮತ್ತು ಆ್ಯಕ್ಷನ್-ಪ್ಯಾಕ್ಡ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಮುದ್ರಕನಿ, ಸಾಯಿ ಕುಮಾರ್, ಜರೀನಾ ವಹಾಬ್ ಸೇರಿದಂತೆ ದೊಡ್ಡ ತಾರಾಬಳಗ ನಟಿಸಿದೆ.

ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ದಸರಾ ಸಿನಿಮಾಕ್ಕಿದೆ. ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಪಕ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: 'ನೀ ನೋಡೋಕೆ ಸಿಕ್ಸ್ಟೀನ್ ಸ್ವೀಟಿ, ಬಿಟ್ಕೋಳೆ ಒಂದ್ ನೈಂಟಿ'... ಅಂತಿದಾರೆ ಉಪ್ಪಿ

ABOUT THE AUTHOR

...view details