ಬಾಲಿವುಡ್ನ 'ದಬಾಂಗ್ 3' ಶೂಟಿಂಗ್ನಲ್ಲಿ ಬ್ಯುಸಿಯಿದ್ದ ನಟ ಸುದೀಪ್, ಕೊಂಚ ಬ್ರೇಕ್ ಪಡೆದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಸಲ್ಮಾನ್ ಖಾನ್ ನಟನೆಯ 'ದಬಾಂಗ್ 3' ಗೆ ಕಿಚ್ಚ 80 ದಿನಗಳ ಕಾಲ್ಶೀಟ್ ಕೊಟ್ಟಿದ್ದಾರೆ. ಕಳೆದ ವಾರ ಬಿಟೌನ್ ಅಂಗಳಕ್ಕೆ ಹಾರಿರುವ ಅಭಿಯ ಚಕ್ರವರ್ತಿ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. ಮೊನ್ನೆಯಷ್ಟೆ ಚಿತ್ರದ ಕ್ಷ್ಯಮ್ಯಾಕ್ಸ್ ಸೀನ್ ಶೂಟ್ ಬಗ್ಗೆ ಟ್ವಿಟ್ಟರ್ನಲ್ಲಿ. ಇದೀಗ ನಿನ್ನೆ ಶೂಟಿಂಗ್ನಿಂದ ಬಿಡುವು ಮಾಡಿಕೊಂಡು, ಮಗಳ ಜನ್ಮದಿನದ ಆಚರಣೆಗಾಗಿ ಮನೆಗೆ ಬಂದಿದ್ದಾರೆ.
ಮಗಳ ಜನ್ಮದಿನದ ಸಂಭ್ರಮದಲ್ಲಿ ಕಿಚ್ಚನ ದಂಪತಿ ಕನ್ನಡದ ಈ ಬಚ್ಚನ್ ತಮ್ಮ ವೃತ್ತಿಗೆ ನೀಡುವ ಪ್ರಾಶಸ್ತ್ಯವನ್ನು ಕುಟುಂಬಕ್ಕೂ ನೀಡುತ್ತಾರೆ. ಅದರಲ್ಲೂ ಮಗಳು ಸಾನ್ವಿ ಅಂದ್ರೆ ಸುದೀಪ್ಗೆ ಪಂಚಪ್ರಾಣ. ತಾವು ಶೂಟಿಂಗ್ನಲ್ಲಿ ಎಷ್ಟೇ ಬ್ಯೂಸಿಯಿದ್ದರೂ, ಮಗಳ ಬರ್ತ್ಡೇ ಮಾತ್ರ ಮಿಸ್ ಮಾಡ್ಕೋಳ್ಳುವುದಿಲ್ಲ ಎಂದಿರುವ ಅವರು, ಈ ಬಾರಿಯೂ ಮುಂಬೈನಿಂದ ಬಂದು ಸಾನ್ವಿಯ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದೇನೆ ಎಂದಿದ್ದಾರೆ. ನಿನ್ನೆ ಟ್ವಿಟ್ಟರ್ನಲ್ಲಿ ತಮ್ಮ ಪುತ್ರಿಗೆ ವಿಶ್ ಮಾಡಿರುವ ಕಿಚ್ಚ, ಸಾನ್ವಿಯ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.
ಕನ್ನಡದ ಪ್ರಭುದೇವ್ ದಬಾಂಗ್ 3 ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರದು ನೆಗೆಟಿವ್ ರೋಲ್. ಒಂಭತ್ತು ವರ್ಷಗಳ ಬಳಿಕ ಮತ್ತೆ ಬಾಲಿವುಡ್ಗೆ ಹಾರಿರುವ ಸುದೀಪ್, ಸಲ್ಲು ಭಾಯ್ ವಿರುದ್ಧ ವಿಲನ್ ಆಗಿ ಅಬ್ಬರಿಸಲಿದ್ದಾರೆ.