ಅದು 2010 ರಲ್ಲಿ ನಡೆದ ಘಟನೆ. ಅಂದಿನ ಸಾರಿಗೆ ಸಚಿವ ಆರ್.ಅಶೋಕ್ ಅವರನ್ನು ಬಿಟ್ಟು ಬರಲು ಬೆಂಗಳೂರು ರೈಲು ನಿಲ್ದಾಣಕ್ಕೆ ಜಗ್ಗೇಶ್ ಹೋಗಿದ್ದರು. ರಾತ್ರಿ10ಕ್ಕೆ ರೈಲು ಹಳಿಯಿಂದ ಯಾರೋ ಚೀರುತ್ತಿದ್ದ ಶಬ್ಧ ಇವರಿಗೆ ಕೇಳಿಸಿತು. ಗಾಬರಿಯಿಂದ ಬಗ್ಗಿ ನೋಡಿದಾಗ ವ್ಯಕ್ತಿಯ ಕಾಲುಗಳು ತುಂಡಾಗಿರುತ್ತವೆ. ತಲೆ ರೈಲು ಚಕ್ರಗಳ ಮಧ್ಯೆ ಸಿಲುಕಿಕೊಂಡಿರುತ್ತದೆ. ಚಲಿಸಲು ರೆಡಿಯಾಗಿದ್ದ ರೈಲು ಹಾರನ್ ಹಾಕುತ್ತಿರುತ್ತದೆ. ಇದನ್ನು ನೋಡಿದ ಜಗ್ಗೇಶ್ ಕೂಡಲೇ ತನ್ನ PA ರಾಮಲಿಂಗಯ್ಯನಿಗೆ ರೈಲು ನಿಲ್ಲಿಸಲು ಹೇಳುತ್ತಾರೆ. ಆತ ಇಂಜಿನ್ ಮಂದೆ ನಿಂತೆ ಬಿಡುತ್ತಾನೆ.
ಜಗ್ಗೇಶ್ ತಮ್ಮ ಗನ್ ಮ್ಯಾನ್ ರಾಘವೇಂದ್ರ ಸಹಾಯದಿಂದ ಆತನನ್ನು ಮೇಲೆ ಎಳೆಯುತ್ತಾರೆ. ತುಂಡಾದ ಕಾಲುಗಳು, ರಕ್ತಸ್ರಾವ, ಮಾತಾಡಲು ಆಗದೆ ಜೀವಹೋಗುತ್ತಿತ್ತು.ಕೂಡಲೇ ಆ್ಯಂಬುಲೆನ್ಸ್ ತರಿಸಿ ಸಮಯಕ್ಕೆ ಸರಿಯಾಗಿ ಬೌರಿಂಗ್ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆ ಮುಖ್ಯಸ್ಥ ಡಾ.ತಿಲಕ್ ಕೂಡ ಜಗ್ಗೇಶ್ ಆತ್ಮೀಯರಾಗಿರುತ್ತಾರೆ. ಸಾಕ್ಷಾತ್ ಶಿವನಂತೆ ಡಾ.ತಿಲಕ್ ಅವರು ಗಾಯಾಳುವಿಗೆ ಶಸ್ತ್ರಚಿಕಿತ್ಸೆ ಮಾಡಿ ಉಳಿಸಿಬಿಟ್ಟರು.