ಕರ್ನಾಟಕ

karnataka

ETV Bharat / sitara

ತೆಲುಗು ಚಿತ್ರರಂಗದ ವಿರುದ್ಧ ಗರಂ‌ ಆದ ದರ್ಶನ್...ಕಾರಣ ಏನು...? - Darshan starring Robert movie

ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ರಾಬರ್ಟ್' ಸಿನಿಮಾವನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಡುಗಡೆ ಮಾಡಲು ಟಾಲಿವುಡ್ ಮಂದಿ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ದರ್ಶನ್ ಬೇಸರ ವ್ಯಕ್ತಪಡಿಸಿದ್ದು ಫಿಲ್ಮ್ ಚೇಂಬರ್​​​ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Darshan angry on Tollywood
ಟಾಲಿವುಡ್​​ ವಿರುದ್ಧ ದರ್ಶನ್ ಗರಂ

By

Published : Jan 29, 2021, 8:42 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್' ಇದೇ ಮಾರ್ಚ್ 11, ಮಹಾ ಶಿವರಾತ್ರಿ ದಿನದಂದು ಬಿಡುಗಡೆಯಾಗಲು ದಿನಾಂಕ ನಿಗದಿಯಾಗಿದೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ ತೆಲುಗಿನಲ್ಲಿ ಕೂಡಾ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ 'ರಾಬರ್ಟ್' ಚಿತ್ರವನ್ನು ಟಾಲಿವುಡ್​​ನಲ್ಲಿ ಬಿಡುಗಡೆ ಮಾಡಲು ಅಲ್ಲಿನ ಮಂದಿ ನಿರಾಕರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

'ರಾಬರ್ಟ್'

ಇದನ್ನೂ ಓದಿ:ಸಲಾರ್​​ನಲ್ಲಿ ಪ್ರಭಾಸ್​​ ಜೊತೆ ಶೃತಿ ಹಾಸನ್!​

ಆಂಧ್ರ, ತೆಲಂಗಾಣದಲ್ಲಿ 'ರಾಬರ್ಟ್' ಬಿಡುಗಡೆಗೆ ಯಾರು ಅಡ್ಡಿ ಪಡಿಸುತ್ತಿದ್ದಾರೆ..? ಅದಕ್ಕೆ ಕಾರಣ ಏನು ..? ಎಂಬ ವಿಚಾರ ಮಾತ್ರ ತಿಳಿದುಬಂದಿಲ್ಲ. ಆದರೆ ಚಿತ್ರಮಂದಿರಗಳು ತೆರೆಯುತ್ತಿದ್ದಂತೆ ಕರ್ನಾಟಕದಲ್ಲಿ ಎಂದಿನಂತೆ ಪರಭಾಷೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ ಕನ್ನಡ ಸಿನಿಮಾಗಳಿಗಿಂತ ತೆಲುಗು ಸಿನಿಮಾಗಳು ಹೆಚ್ಚು ಹೆಚ್ಚು ಥಿಯೇಟರ್​​​ಗಳನ್ನು ಆವರಿಸಿಕೊಳ್ಳುತ್ತಿ ವೆ. ಆದರೆ 'ರಾಬರ್ಟ್' ಸಿನಿಮಾವನ್ನು ಮಾತ್ರ ತಮ್ಮ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬೇಸರ ವ್ಯಕ್ತಪಡಿಸಿದ್ದು ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ನಿರ್ದೇಶಕ ತರುಣ್ ಸುಧೀರ್​​​ ಜೊತೆ ಸೇರಿ ತೆಲುಗು ಚಿತ್ರರಂಗದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ನಮ್ಮ ಸಿನಿಮಾ ಬಿಡುಗಡೆ ಮಾಡಲು ಅಲ್ಲಿ ಅವಕಾಶ ಇಲ್ಲ ಎಂದ ಮೇಲೆ, ಅಲ್ಲಿನ ಸಿನಿಮಾವನ್ನು ಕರ್ನಾಟಕದಲ್ಲಿ ಏಕೆ ಬಿಡುಗಡೆ ಮಾಡಬೇಕೆಂದು ಉಮಾಪತಿ ಪ್ರಶ್ನಿಸಿದ್ದಾರೆ.

ABOUT THE AUTHOR

...view details