'ಹೆಡ್ ಬುಷ್' ಚಿತ್ರದಲ್ಲಿ ಡಾಲಿ ಧನಂಜಯ್, ಬೆಂಗಳೂರಿನ ಮಾಜಿ ಭೂಗತದೊರೆ ಎಂ.ಪಿ. ಜಯರಾಜ್ ಅವರ ಪಾತ್ರ ಮಾಡುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಈಗ ಆ ಚಿತ್ರಕ್ಕೆ ಧನಂಜಯ್ ಕೇವಲ ಹೀರೋ ಅಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಹೆಡ್ ಬುಷ್ ಚಿತ್ರವು ಇಷ್ಟರಲ್ಲಿ ಮುಗಿದಿರಬೇಕಿತ್ತು. ಕಳೆದ ವರ್ಷದ ಆರಂಭದಲ್ಲೇ ಈ ಚಿತ್ರದ ಘೋಷಣೆಯಾಗಿತ್ತು. ಆದರೆ, ಲಾಕ್ಡೌನ್ನಿಂದಾಗಿ ಚಿತ್ರ ಶುರುವಾಗುವುದು ಒಂದೂವರೆ ವರ್ಷ ತಡವಾಗಿದೆ. ಚಿತ್ರ ಘೋಷಣೆಯಾದ ಸಂದರ್ಭದಲ್ಲಿ ಅಶು ಬೆದ್ರ ನಿರ್ಮಾಪಕರಾಗಿದ್ದರು. ಆದರೆ, ಈಗ ಅವರು ಚಿತ್ರ ತಂಡದಿಂದ ಹೊರಬಂದಿದ್ದಾರೆ. ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಧನಂಜಯ್ ವಹಿಸಿಕೊಂಡಿದ್ದು, ಧನಂಜಯ್ ಮತ್ತು ಸೋಮಣ್ಣ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.