ಹಸಿರೇ ಉಸಿರು, ಹಸರೀಕರಣ ಇದೀಗ ಕಾಂಕ್ರೀಟಿಕರಣ ಪರಿಸರಕ್ಕೆ ಮಾರಕ ಎಂಬ ಸಂದೇಶವನ್ನು ನಟ ಅನಿರುದ್ಧ್ ನೀಡಿದ್ದಾರೆ. ತುರಹಳ್ಳಿ ಅರಣ್ಯ ಉಳಿಸುವಂತೆ ಹಾಗೂ ಅಲ್ಲಿ ನಡೆಸಲು ಮುಂದಾಗಿರುವ ಯೋಜನೆಗಳಿಂದ ಪರಿಸರಕ್ಕೆ ಹಾನಿಯುಂಟಾಗಬಹುದು. ಈ ಬಗ್ಗೆ ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಹಾಗೆಯೇ, ಸ್ವಚ್ಛತೆಗಾಗಿ ನಾನೂ ಸಹಬಾಗಿ ಅಭಿಯಾನದಲ್ಲಿ ನಟ ಅನಿರುದ್ಧ್, ರಸ್ತೆ ವಿಭಜಕ (ರೋಡ್ ಡಿವೈಡರ್ಸ್) ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವಂತೆ ಬಿಬಿಎಂಪಿಗೆ ಹೇಳಿದ್ದಾರೆ.
ತುರಹಳ್ಳಿ ಅರಣ್ಯ ಉಳಿಸುವಂತೆ ನಟ ಅನಿರುದ್ಧ್ ಮನವಿ ಮಾಡಿಕೊಂಡಿದ್ದಾರೆ. https://www.facebook.com/107502077316700/posts/506897240710513/ ಜಯನಗರದ ಎಫ್ ಬ್ಲಾಕ್ನ ರಸ್ತೆ ಡಿವೈಡರ್ಗಳು ಶೋಚನೀಯ ಹಂತಕ್ಕೆ ತಲುಪಿದ್ದು, ಅಲ್ಲಿ ಸಸಿ ನೆಡುವ ಕೆಲಸವನ್ನು ಅನಿರುದ್ದ್ ಮಾಡಿದ್ದಾರೆ.ಇತ್ತೀಚಿಗೆ ಫೇಸ್ಬುಕ್ನಲ್ಲಿ ವಿಡಿಯೋ ಶೇರ್ ಮಾಡಿರುವ ಅನಿರುದ್ಧ್, ಶೋಚನೀಯವಾಗಿದ್ದ ರಸ್ತೆ ಡಿವೈಡರ್ಗಳು ಈಗ ಅಥಾರಿಟಿಯಿಂದ ಸ್ವಚ್ಛ ಮಾಡಲ್ಪಟ್ಟಿದೆ ಎಂದು ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನಗರದಲ್ಲಿ ಹಸಿರನ್ನು ಹೆಚ್ಚು ಮಾಡುವ ಸಲುವಾಗಿ ಈಗ ನಾವು ಅಲ್ಲಿ ಗಿಡ ನೆಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೇ ಅಭಿಮಾನಿಗಳು ಹಾಗೂ ಹಿಂಬಾಲಕರಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಲು ನೇತೃತ್ವ ವಹಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.
ಬಿಗ್ಬಾಸ್ ಸೀಸನ್ 8 ರಲ್ಲಿ ಭಾಗವಹಿಸುವ ವದಂತಿಯನ್ನು ತಳ್ಳಿ ಹಾಕಿರುವ ಅನಿರುದ್ಧ್ ಜೊತೆಜೊತೆಯಲಿ ಧಾರಾವಾಹಿಯನ್ನು ತೊರೆಯಲು ಬಯಸುವುದಿಲ್ಲ ಎಂದಿದ್ದಾರೆ.