ಕರ್ನಾಟಕ

karnataka

ETV Bharat / sitara

'ಕೃಷ್ಣ'ನ ಜಪ ಮುಂದುವರೆಸಿದ ಅಜಯ್ ರಾವ್! - undefined

'ಕೃಷ್ಣ ಟಾಕೀಸ್' ಸಿನಿಮಾದಲ್ಲಿ ಅಜಯ್ ರಾವ್ ಜೊತೆಗೆ ಅಪೂರ್ವ ಹಾಗೂ ಸಿಂಧು ಲೋಕನಾಥ್ ನಾಯಕಿಯರಾಗಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ಪ್ರಮೋದ್ ಶೆಟ್ಟಿ, ಪ್ರಕಾಶ್​ ತುಮಿನಾಡು, ಶೋಭರಾಜ್, ಮಂಡ್ಯ ರಮೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಅಜಯ್ ರಾವ್

By

Published : May 9, 2019, 9:50 AM IST

ನಟ ಅಜಯ್ ರಾವ್ ಕನ್ನಡ ಚಿತ್ರರಂಗದ ಖಾಯಂ ‘ಕೃಷ್ಣ’. ಈ ನಟ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲ, ಕೃಷ್ಣ ರುಕ್ಕು, ಕೃಷ್ಣ ಸನ್ ಆಫ್ ಸಿಎಂ ಚಿತ್ರಗಳಲ್ಲಿ ನಟಿಸಿ ಕೃಷ್ಣ ಅನ್ನೋ ಟ್ಯಾಗ್​ ನೇಮ್​ ಅಂಟಿಸಿಕೊಂಡಿದ್ದಾರೆ. ಈಗ ಅವರ ಮತ್ತೊಂದು ಚಿತ್ರ ಕೂಡ 'ಕೃಷ್ಣ' ಹೆಸರಿನಿಂಲೇ ಸೆಟ್ಟೇರುತ್ತಿದೆ.

ವಿಜಯಾನಂದ್ (ಆನಂದ ಪ್ರಿಯ) ನಿರ್ದೇಶನದ ‘ಕೃಷ್ಣ ಟಾಕೀಸ್’ ಚಿತ್ರದಲ್ಲಿ ಅಜಯ್ ರಾವ್ ಲೀಡ್ ರೋಲ್ ಪ್ಲೇ ಮಾಡ್ತಿದ್ದಾರೆ. ಆನಂದ ಪ್ರಿಯ ಉರುಫ್​ ವಿಜಯಾನಂದ್, ಹಿರಿಯ ಗೀತ ರಚನೆಕಾರ, ನಟ ಹಾಗೂ ನಿರ್ದೇಶಕ ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಸಹೋದರ.

'ಕೃಷ್ಣ ಟಾಕೀಸ್' ಸಿನಿಮಾದಲ್ಲಿ ಅಜಯ್ ರಾವ್ ಜೊತೆಗೆ ಅಪೂರ್ವ ಹಾಗೂ ಸಿಂಧು ಲೋಕನಾಥ್ ನಾಯಕಿಯರಾಗಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ಪ್ರಮೋದ್ ಶೆಟ್ಟಿ, ಪ್ರಕಾಶ್​ ತುಮಿನಾಡು, ಶೋಭರಾಜ್, ಮಂಡ್ಯ ರಮೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ಅಜಯ್ ರಾವ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತಿಮ್ಮೆಗೌಡರ ನಿರ್ದೇಶನವಿರಲಿದ್ದು, 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ನಾಯಕಿ ಸಂಜನಾ ಆನಂದ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

For All Latest Updates

TAGGED:

ABOUT THE AUTHOR

...view details