ಕರ್ನಾಟಕ

karnataka

ETV Bharat / sitara

7 ರಾಜ್ಯಗಳಲ್ಲಿ 'ಚಾರ್ಲಿ' ಚಿತ್ರೀಕರಣ; ಆಗಸ್ಟ್​ನಲ್ಲಿ ರಿಲೀಸ್ ಎಂದ್ರು ನಿರ್ದೇಶಕ ಕಿರಣ್‍ರಾಜ್ - Director Kiranraj

777 ಚಾರ್ಲಿ ಸಿನಿಮಾ ಕನ್ನಡವಲ್ಲದೆ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದ್ದು, ಈ ನಾಲ್ಕು ಭಾಷೆಗಳ ಟೀಸರ್ ಏಕಕಾಲಕ್ಕೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕಿರಣ್‍ರಾಜ್ ಹೇಳಿದ್ದಾರೆ.

777 Charlie Cinema
7 ರಾಜ್ಯಗಳಲ್ಲಿ ಚಿತ್ರೀಕರಣವಾಗಿದಿಯಂತೆ ಚಾರ್ಲಿ

By

Published : Feb 7, 2021, 7:33 PM IST

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ 777 ಚಾರ್ಲಿ ಚಿತ್ರ ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ.

ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ಕಿರಣ್‍ರಾಜ್, ಕೆಲವು ದಿನಗಳ ಪ್ಯಾಚ್‍ವರ್ಕ್ ಕೆಲಸ ಮುಗಿದರೆ ಚಿತ್ರೀಕರಣ ಮುಗಿದಂತೆ ಎಂದಿದ್ದಾರೆ. ಮೂರು ವರ್ಷಗಳ ಅಂತರದಲ್ಲಿ ಸುಮಾರು 151 ದಿನಗಳ ಕಾಲ ಬರೋಬ್ಬರಿ ಏಳು ರಾಜ್ಯಗಳಲ್ಲಿ ಚಿತ್ರೀಕರಣ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಕರ್ನಾಟಕದಿಂದ ಹೊರಟು ಗೋವಾ, ಗುಜರಾತ್, ರಾಜಸ್ತಾನ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರ ರಾಜ್ಯಗಳಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಯಾವುದೇ ಅಪ್‍ಡೇಟ್‍ಗಳಿಲ್ಲ ಎಂದು ರಕ್ಷಿತ್ ಅಭಿಮಾನಿಗಳು ದೂರುತ್ತಿರುವ ಕುರಿತು ಮಾತನಾಡಿರುವ ಅವರು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಎಲ್ಲವೂ ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಚಿತ್ರದ ಬಗ್ಗೆ ಇನ್ನಷ್ಟು ವಿಷಯಗಳನ್ನು ಹೇಳಿಕೊಳ್ಳುವುದಾಗಿ ತಿಳಿಸಿದ್ದಾರೆ. ಒಂದೊಳ್ಳೆಯ ದಿನ ನೋಡಿಕೊಂಡು ಟೀಸರ್ ಬಿಡುಗಡೆ ಮಾಡಲಾಗುಗವುದು. 777 ಚಾರ್ಲಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ, ದಾನಿಶ್ ಸೇಠ್, ರಾಜ್ ಬಿ. ಶೆಟ್ಟಿ, ತಮಿಳಿನ ಜನಪ್ರಿಯ ನಟ ಬಾಬ್ಬಿ ಸಿಂಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details