ಕರ್ನಾಟಕ

karnataka

ETV Bharat / sitara

'ಜೇಮ್ಸ್​​' ಸಿನಿಮಾ ರಿಲೀಸ್​ಗೆ 45 ದಿನಗಳು ಬಾಕಿ : ಸ್ವಾಗತಿಸಲು ರೆಡಿಯಾಗಿವೆ 5 ಹೆಲಿಕಾಪ್ಟರ್​​​ಗಳು

ಜೇಮ್ಸ್ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿಮಾನಿಗಳ ಕಾತರ ಹೆಚ್ಚಿಸಿರುವ ಚಿತ್ರವಾಗಿದೆ. ಜೇಮ್ಸ್ ಅಪ್ಪು ಹುಟ್ಟು ಹಬ್ಬಕ್ಕೆ ರಿಲೀಸ್ ಆಗಲಿದ್ದು, ಬೆಂಗಳೂರಿನ 5 ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಅವರ ದೊಡ್ಡದಾದ ಕಟೌಟ್​ಗಳನ್ನ ನಿಲ್ಲಿಸಲು ತೀರ್ಮಾನಿಸಲಾಗಿದೆ. ಆ ಕಟೌಟ್​ಗಳಿಗೆ ಹೆಲಿಕಾಪ್ಟರ್ ಮೂಲಕ ಹೂ ಮಳೆ ಸುರಿಸಲು ದೊಡ್ಮನೆ ಅಭಿಮಾನಿಗಳು ರೆಡಿಯಾಗ್ತಿದ್ದಾರೆ..

45 days pending for 'James' movie release
'ಜೇಮ್ಸ್​​' ಸಿನಿಮಾ ಸ್ವಾಗತಿಸಲು ರೆಡಿಯಾಗಿವೆ 5 ಹೆಲಿಕಾಪ್ಟರ್​​​ಗಳು

By

Published : Jan 31, 2022, 4:50 PM IST

ಪವರ್​​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ 'ಜೇಮ್ಸ್​​' ಸಿನಿಮಾದ ಪೋಸ್ಟರ್​​ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಈ ಚಿತ್ರ ಪುನೀತ್​​ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದೆ.

'ಜೇಮ್ಸ್​​' ಸಿನಿಮಾದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಅಭಿಮಾನಿಗಳ ಆಸೆಯಂತೆ 'ಜೇಮ್ಸ್' ಸಿನಿಮಾ ಪವರ್ ಸ್ಟಾರ್ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಆಗಲು ಸಜ್ಜಾಗಿದೆ.

'ಜೇಮ್ಸ್​​' ಸಿನಿಮಾ ಸ್ವಾಗತಿಸಲು ರೆಡಿಯಾಗಿವೆ 5 ಹೆಲಿಕಾಪ್ಟರ್​​​ಗಳು

ಈ ಹಿನ್ನೆಲೆ ಪುನೀತ್ ರಾಜ್​​​ಕುಮಾರ್ ಅಭಿಮಾನಿಗಳು ಜೇಮ್ಸ್ ಸಿನಿಮಾ ಬಿಡುಗಡೆಯನ್ನ ಹಬ್ಬದಂತೆ ಆಚರಿಸಲು ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ 5 ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಅವರ ದೊಡ್ಡದಾದ ಕಟೌಟ್​ಗಳನ್ನ ನಿಲ್ಲಿಸಿ, ಆ ಕಟೌಟ್​ಗಳಿಗೆ ಹೆಲಿಕಾಪ್ಟರ್ ಮೂಲಕ ಹೂ ಮಳೆ ಸುರಿಸಲು ದೊಡ್ಮನೆ ಅಭಿಮಾನಿಗಳು ರೆಡಿಯಾಗ್ತಿದ್ದಾರೆ. ವಿಶೇಷ ಅಂದ್ರೆ ಜೇಮ್ಸ್ ಚಿತ್ರದ ಬಿಡುಗಡೆಗೆ ಇನ್ನು 45 ದಿನಗಳು ಬಾಕಿ ಇರುವಾಗಲೇ ಅಪ್ಪು ಅಭಿಮಾನಿಗಳಲ್ಲಿ ಈ ಚಿತ್ರದ ಫೀವರ್ ಹೆಚ್ಚಾಗುತ್ತಿದೆ.

ಅಭಿಮಾನಿಗಳತ್ತ ಕೈ ಬೀಸುತ್ತಿರುವ ಅಪ್ಪು

ಈ ಹಿಂದೆ ಯಾವ ಹೀರೋ ಸಿನಿಮಾಗೂ ಸ್ವಾಗತಿಸದ ರೀತಿ ಜೇಮ್ಸ್​​ಗೆ ಸ್ವಾಗತ ಮಾಡಲು ತಯಾರಿ ಮಾಡಿರುವ ಅಪ್ಪು ಫ್ಯಾನ್ಸ್, ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ. ಐದು ಹೆಲಿಕಾಪ್ಟರ್​​ಗಳಲ್ಲಿ ಒಂದು ಹೆಲಿಕಾಪ್ಟರ್​​ನನ್ನು ದುಬಾರಿ ಬಾಡಿಗೆ ಕೊಟ್ಟು ಮಾರ್ಚ್ 17ಕ್ಕೆ ಜೇಮ್ಸ್ ಸ್ವಾಗತ ಮಾಡಲು ರೆಡಿಯಾಗುವಂತೆ ಹೇಳಿದ್ದಾರೆ.

ಇದನ್ನೂ ಓದಿ:ಮನೆಗೆ ಬಂದ ಬಿಗ್​ಬಾಸ್​ ವಿಜೇತೆಗೆ ವಿಶೇಷವಾಗಿ ಬರ ಮಾಡಿಕೊಂಡ ಪೋಷಕರು! ವಿಡಿಯೋ

ಮಾರ್ಚ್ 17ರಂದು ಬೆಳಗ್ಗೆಯೇ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ 10 ಗಂಟೆ ವೇಳೆಗೆ ಆರು ಹೆಲಿಕಾಪ್ಟರ್​​ಗಳು ಬೆಂಗಳೂರು, ಚನ್ನಪಟ್ಟಣ, ಬಳ್ಳಾರಿಯ ಹೊಸಪೇಟೆ, ಶಿವಮೊಗ್ಗ, ಮೈಸೂರು, ಶಿರಾದಲ್ಲಿ ಏಕ ಕಾಲಕ್ಕೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​​ ಕಟೌಟ್​​ಗಳಿಗೆ ಹೂಮಳೆ ಸುರಿಸುವ ಮೂಲಕ ಅಪ್ಪುಗೆ ಅಭಿಮಾನದ ಅಭಿಷೇಕ ಮಾಡಲು ಅಭಿಮಾನಿ ದೇವರುಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಇದರ ಜೊತೆಗೆ ಜೇಮ್ಸ್​​​ ಚಿತ್ರ ಅಪ್ಪು ಅಭಿನಯದ 30ನೇ ಸಿನಿಮಾವಾಗಿರುವ ಕಾರಣ, ಕೆಜಿ ರಸ್ತೆಯ ಚಿತ್ರಮಂದಿರದ ಬಳಿ ಅಪ್ಪು ಅಭಿನಯದ 30 ಚಿತ್ರಗಳ ಕಟೌಟ್ ನಿಲ್ಲಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಜೊತೆಗೆ ಮಾರ್ಚ್ 17ರಂದು ಇಡೀ ದಿನ ಅನ್ನದಾನ ಮಾಡಲು ಸಿದ್ದತೆ ಮಾಡಿಕೊಂಡಿರುವ ಅಪ್ಪು ಫ್ಯಾನ್ಸ್, ರಕ್ತದಾನ, ನೇತ್ರದಾನದ ವ್ಯವಸ್ಥೆಯನ್ನು ಮಾಡಲಿದ್ದಾರೆ‌.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್

ಜೇಮ್ಸ್ ಸಿನಿಮಾ ರಿಲೀಸ್ ಹಾಗೂ ಪವರ್ ಸ್ಟಾರ್ ಹುಟ್ಟುಹಬ್ಬ ಒಂದೇ ದಿನ ಆಗಿರೋ ಕಾರಣ ಎಲ್ಲಾ ಕಡೆ ದಸರಾ ಉತ್ಸವದಂತೆ ದೊಡ್ಮನೆ ರಾಜಕುಮಾರನ ಹುಟ್ಟು ಹಬ್ಬ ಮತ್ತು ಜೇಮ್ಸ್ ಸೆಲಬ್ರೇಶನ್ ಮಾಡಲು ದೊಡ್ಮನೆ ಅಭಿಮಾನಿಗಳು ದೊಡ್ಡ ಪ್ಲಾನ್ ಮಾಡಿದ್ದಾರೆ.

ವಿಶೇಷ ಅಂದ್ರೆ ಇಷ್ಟು ಅದ್ಧೂರಿ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಪವರ್ ಸ್ಟಾರ್ ಅಭಿಮಾನಿಗಲೇ ಭರಿಸಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ ಜೇಮ್ಸ್​​ ಆಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details