ಕರ್ನಾಟಕ

karnataka

ETV Bharat / sitara

ಸತೀಶ್​ ಸಿನಿಮಾಗೆ ಬಂಡವಾಳ ಹಾಕ್ಬೇಡಿ ಅಂದಿತ್ತಂತೆ ಗಾಂಧಿ ನಗರ... ನೆನೆದು ಭಾವುಕನಾದ ಅಯೋಗ್ಯ - ಭಾವುಕ

ನಟ ನೀನಾಸಂ ಸತೀಶ್ ನಟನೆಯ ಅಯೋಗ್ಯ ಚಿತ್ರ ಶತದಿನ ಪೊರೈಸಿತು. ಟೈಗರ್​​ಗಲ್ಲಿ ಚಿತ್ರದ ಸೋಲಿನಿಂದ ಕಂಗಾಲಾಗಿದ್ದ ಸತೀಶನಿಗೆ ಅಯೋಗ್ಯ ಚಿತ್ರರಂಗದಲ್ಲಿ ಮರುಹುಟ್ಟು ನೀಡಿತು. ಇತ್ತೀಚಿಗೆ ಅವರು ನಟಿಸಿರುವ ಚಂಬಲ್ ಚಿತ್ರಕ್ಕೂ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿದೆ.

ಅಯೋಗ್ಯ ಚಿತ್ರದ ನೂರುದಿನದ ಸಂಭ್ರಮಾಚರಣೆ

By

Published : Mar 11, 2019, 9:48 AM IST

Updated : Mar 11, 2019, 10:46 AM IST

ನಟ ನೀನಾಸಂ ಸತೀಶ್ ಎಂದಾಕ್ಷಣ ನಮಗೆ ನೆನಪಾಗೋದು ಲೂಸಿಯಾ, ಡ್ರಾಮಾ ಹಾಗೂ ಅಯೋಗ್ಯ ಚಿತ್ರಗಳು. ಸಹನಟನಾಗಿ ನಟಿಸಿ ನಾಯಕನಾಗಿ ಅವಕಾಶ ಪಡೆದು ಸಕ್ಸಸ್ ಕಂಡ ಸತೀಶ್ ಒಂದೆರಡು ಚಿತ್ರಗಳ ಸೋಲಿನಿಂದ ಅವಕಾಶಗಳಿಲ್ಲದೆ ಕಷ್ಟದ ದಿನಗಳನ್ನು ಎದುರಿಸಿದ್ದರಂತೆ.

ಹೀಗೆ ಅವಕಾಶ ವಂಚಿತವಾಗಿದ್ದ ನನಗೆ ಕೈ ಹಿಡಿದ್ದಿದ್ದು 'ಅಯೋಗ್ಯ' ಎಂದು ಈ ಚಿತ್ರದ ನೂರು ದಿನದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸತೀಶ್ ಹೇಳಿದ್ರು‌. ವೇದಿಕೆಯಲ್ಲಿ ಭಾವನಾತ್ಮಕವಾಗಿಯೇ ಮಾತನಾಡಿದ ಅವರು, ತಮ್ಮ ಕಷ್ಟದ ದಿನಗಳ ನೆನೆದರು.

ಅಯೋಗ್ಯ ಚಿತ್ರದ ನೂರುದಿನದ ಸಂಭ್ರಮಾಚರಣೆ

ಅಯೋಗ್ಯ ಚಿತ್ರದ ನೂರುದಿನದ ಸಂಭ್ರಮಾಚರಣೆ

ಸತೀಶ್ ತಮ್ಮ 'ಟೈಗರ್ ಗಲ್ಲಿ' ಚಿತ್ರ ಪ್ರೇಕ್ಷಕರು ತಿರಸ್ಕರಿಸಿದ್ದರು ಎನ್ನುವ ನೋವಿನಲ್ಲಿದ್ದರಂತೆ. ಇದೇ ಸಮಯದಲ್ಲಿ 'ಅಯೋಗ್ಯ' ಚಿತ್ರದ ಕಥೆ ಫೈನಲಾಗಿ ಅಗ್ರಿಮೆಂಟ್​​ಗೆ ಸಹಿ ಹಾಕೋದೊಂದು ಬಾಕಿಯಿತ್ತಂತೆ. ಅಂದು ಅಯೋಗ್ಯ ನಿರ್ಮಾಪಕ ಚಂದ್ರಶೇಖರ್ 'ಟೈಗರ್ ಗಲ್ಲಿ' ಚಿತ್ರ ನೋಡಿ ಬಂದಿದ್ರಂತೆ. ಖಾಲಿ ಥಿಯೇಟರ್​​​ನಲ್ಲಿ ಚಿತ್ರ ನೋಡಿ ಬಂದ ಅವರು ಅದ್ಯಾವ ಧೈರ್ಯದಲ್ಲಿ ಅಯೋಗ್ಯ ಚಿತ್ರ ನಿರ್ಮಾಣ ಮಾಡೋಕೆ ಒಕೆ ಅಂದ್ರೋ ಗೊತ್ತಿಲ್ಲ . ಅಂದು ಅವರು ತೆಗೆದು ಕೊಂಡ ದಿಟ್ಟ ನಿರ್ಧಾರದ ಫಲವಾಗಿ ಇಂದು ನಾವು ಇಲ್ಲಿ ಸೇರಿದ್ದೀವಿ ಎಂದರು ಸತೀಶ್​.

ಅಯೋಗ್ಯ ಚಿತ್ರದ ನೂರುದಿನದ ಸಂಭ್ರಮಾಚರಣೆ

ಇನ್ನು ನಮ್ಮ ನಿರ್ಮಾಪಕರಿಗೆ ನನ್ನನ್ನು ನಂಬಿ ಅಷ್ಟು ಕೋಟಿ ಬಂಡವಾಳ ಹಾಕಬೇಡಿ ಎಂದು ಗಾಂಧಿನಗರದವ್ರು ಹೇಳಿದ್ದರು. ಈ ವಿಷಯ ನೆನಪಿಸಿಕೊಂಡ್ರೆ ಮನಸ್ಸು ಚೂರಾಗಿತ್ತು.ಆ ಎಲ್ಲಾ ಅವಮಾನ, ಅಡೆ-ತಡೆಗಳನ್ನೆಲ್ಲಾ ಅಯೋಗ್ಯ ಚಿತ್ರ ಮರೆಸಿತು.

ಅಯೋಗ್ಯ ಚಿತ್ರದ ನೂರುದಿನದ ಸಂಭ್ರಮಾಚರಣೆ

ಯಾರು ಸಹ ಯಾವ ನಟನನ್ನು ಕೀಳಾಗಿ ಕಾಣಬಾರದು. ಅಯೋಗ್ಯ ಚಿತ್ರದ ಸಕ್ಸಸ್ ಹಿಂದೆ ನಾನು ಸಾಕಷ್ಟು ಕಷ್ಟ ಅನುಭವಿಸಿದ್ದೇನೆ. ಈ ಸಕ್ಸಸ್​​​ಗಾಗಿಯೇ ನಾನು ಬಹಳ ದಿನಗಳಿಂದ ಕಾದಿದ್ದೆ.ನನ್ನ ಈ ಸಕ್ಸಸ್​​​ಗೆ ನಟ ಶ್ರೀಮುರಳಿ ಅವರೇ ಸ್ಫೂರ್ತಿ. ಅವರಂತೆ ನಾನು ದೊಡ್ಡ ಯಶಸ್ಸಿಗೆ ಕಾದಿದ್ದೆ. ಅಯೋಗ್ಯ ಚಿತ್ರ ನನ್ನ ಲಕ್ ಬದಲಿಸಿದೆ ಎಂದು ಹೇಳಿದ ಸತೀಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ ಚಂದ್ರಶೇಖರ್ ಹಾಗೂ ನಿರ್ದೇಶಕ ಮಹೇಶ್​ಗೆ ಧನ್ಯವಾದ ಹೇಳಿದರು.

Last Updated : Mar 11, 2019, 10:46 AM IST

ABOUT THE AUTHOR

...view details