'ಭೂತ್ ಪೊಲೀಸ್' ಸಿನಿಮಾ ಚಿತ್ರೀಕರಣದ ಸಂದರ್ಭದ ಕುರಿತು ನಟಿ ಯಾಮಿ ಗೌತಮ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದೆವ್ವ ಹಿಡಿದಿರುವಂತೆ ಕಾಣಿಸಲು ಅವರು ಮೂರು ಗಂಟೆಗಳಿಗೂ ಹೆಚ್ಚು ಕಾಲ ತಯಾರಿ ನಡೆಸಬೇಕಾಯ್ತು. ನಂತರ ಆ ಲುಕ್ನಿಂದ ಹೊರಬರಲು 45 ನಿಮಿಷ ಬೇಕಾಯ್ತು. ಹಿಮಾಚಲ ಪ್ರದೇಶದಲ್ಲಿ ನಡುಗುವ ಚಳಿಯಲ್ಲಿ ಬರಿಗಾಲಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ಇದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ನನ್ನ ಕುತ್ತಿಗೆ ಗಾಯದ ಹೊರತಾಗಿಯೂ, ನಾನು ಎಲ್ಲವನ್ನೂ ಮಾಡಲು ಬಯಸಿದ್ದೆ, ಮತ್ತು ನನ್ನ ಯೋಗಾಭ್ಯಾಸವು ಇದಕ್ಕೆ ನನಗೆ ಸಹಾಯ ಮಾಡಿತು. ನಾನು ಕೆಲವು ವೃತ್ತಿಪರ ತರಬೇತಿ ತೆಗೆದುಕೊಳ್ಳಲು ನಿರ್ಧರಿಸಿದ್ದೆ. ಆದರೆ, ಕೊರೊನಾ ಸಾಂಕ್ರಾಮಿಕ ಮಾರ್ಗಸೂಚಿಗಳ ಹಿನ್ನೆಲೆ ಆ ಸಮಯದಲ್ಲಿ ತರಬೇತಿ ಪಡೆಯಲು ಸಾಧ್ಯವಾಗಿಲ್ಲ. ಸೆಟ್ ನಲ್ಲಿ ನನ್ನ ಕೈಲಾದಷ್ಟು ಕೆಲಸ, ಸಾಹಸ ಮಾಡಿದ್ದೇನೆ ಎಂದು ಯಾಮಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:'ತಲೈವಿ' ಆಯ್ತು ಇದೀಗ 'ಸೀತಾ' ಚಿತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್