ಹೈದರಾಬಾದ್: ಭಾರತ ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ನಡೆಯುತ್ತಿದ್ದು, ಪತಿ ವಿರಾಟ್ ಜೊತೆ ನಟಿ ಕಮ್ ನಿರ್ಮಾಪಕಿ ಅನುಷ್ಕಾ ಶರ್ಮಾ ತಮ್ಮ 5 ತಿಂಗಳ ಮಗಳು ವಮಿಕಾ ಜೊತೆ ಆಗಮಿಸಿದ್ದಾರೆ.'ಬೆಡ್ರೂಮ್ ಬಾಲ್ಕನಿಯಲ್ಲಿ' ನಿಂತು ಮ್ಯಾಚ್ ಟಾಸ್ನ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಹಂಚಿಕೊಂಡಿದ್ದಾರೆ.
ಶನಿವಾರ, ಅನುಷ್ಕಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟಾಸ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ""Toss from bedroom balcony today," ಎಂದು ಅನುಷ್ಕಾ ಕ್ಯಾಪ್ಷನ್ ನೀಡಿದ್ದು, ಅದರ ಪಕ್ಕದಲ್ಲಿ ಸ್ಮೈಲಿ ಹಾಗೂ ಕ್ರಿಕೆಟ್ ಬ್ಯಾಟ್ನ ಇಮೋಜಿಯನ್ನು ಹಾಕಿಕೊಂಡಿದ್ದಾರೆ.