ಹೈದರಾಬಾದ್ :ಬೀದಿಬದಿ ಆಹಾರ ಮಾರಾಟಗಾರನ ವೈರಲ್ ವಿಡಿಯೋ (Viral Video) ನೋಡಿದ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಟೈಗರ್ ಶ್ರಾಫ್ (Bollywood action star Tiger Shroff ) ನಿಬ್ಬೆರಗಾಗಿದ್ದು, ಯಾರಪ್ಪಾ ಈ ವ್ಯಕ್ತಿ ಎಂದು ಕೇಳಿದ್ದಾರೆ.
ರಾಜಸ್ಥಾನದ ಜೈಪುರದ ಬೀದಿಬದಿ ಆಹಾರ ಮಾರಾಟಗಾರನೊಬ್ಬ ಕುದಿಯುತ್ತಿರುವ ಎಣ್ಣೆ ಬಾಣಲಿಯೊಳಗೆ ಕೈ ಹಾಕಿ ಚಿಕನ್ ಫ್ರೈ (Fry Chicken) ತೆಗೆಯುತ್ತಿರುವ 'ಮೋಜ್' ಆ್ಯಪ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸುಮಾರು ನಾಲ್ಕು ಮಿಲಿಯನ್ ವೀಕ್ಷಣೆ ಗಳಿಸಿತ್ತು. ಅಲ್ಲದೇ ಆತನಿಗೆ ಯಾವುದೇ ನೋವು, ಗಾಯಗಳಾಗಿರುವುದು ಕಂಡು ಬಂದಿರಲಿಲ್ಲ.