ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಜೂನ್ 8ರಂದು 46ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಜನ್ಮದಿನವನ್ನು ಪಾಪರಾಜಿಗಳೊಂದಿಗೆ ಆಚರಿಸಲು ಮನೆಯಿಂದ ಹೊರ ಬಂದಿದ್ದರು. ಈ ವಿಶೇಷ ಸಂದರ್ಭದಲ್ಲಿ ಅವರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
46ನೇ ವಸಂತಕ್ಕೆ ಕಾಲಿಟ್ಟ ಶಿಲ್ಪಾ ಶೆಟ್ಟಿ.. ಪಾಪ್ಸ್ಗಳೊಂದಿಗೆ ಬರ್ತ್ಡೇ ಆಚರಣೆ - ಶಿಲ್ಪಾ ಶೆಟ್ಟಿ ಬರ್ತ್ಡೇ
ಸಹೋದರಿ ಶಮಿತಾ, ಪತಿ ರಾಜ್ ಕುಂದ್ರಾ ಮತ್ತು ಮಗ ವಯಾನ್ ಇದೇ ಸಂದರ್ಭದಲ್ಲಿ ಇದ್ದರು. ಇವರೆಲ್ಲರೂ ಕ್ಯಾಮೆರಾಗಳಿಗೆ ಪೋಸ್ ಕೊಟ್ಟು ಪಾಪರಾಜಿಗಳೊಂದಿಗೆ ಜನುಮದಿನವನ್ನ ಸಂಭ್ರಮಿಸಿದರು..
ಬರ್ತ್ಡೇ ಆಚರಣೆ
ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಈಗಿನ ಹೀರೋಯಿನ್ಗಳಿಗೆ ಟಾಂಗ್ ಕೊಡುವಂಥ ಉಡುಗೆ ತೊಟ್ಟು ಮಿಂಚಿದರು. ಬಿಳಿ ಬ್ಲೇಜರ್ ಜೊತೆಗೆ ಹೂವಿನ ಜಂಪ್‌ಸೂಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಸಹೋದರಿ ಶಮಿತಾ, ಪತಿ ರಾಜ್ ಕುಂದ್ರಾ ಮತ್ತು ಮಗ ವಯಾನ್ ಇದೇ ಸಂದರ್ಭದಲ್ಲಿ ಇದ್ದರು. ಇವರೆಲ್ಲರೂ ಕ್ಯಾಮೆರಾಗಳಿಗೆ ಪೋಸ್ ಕೊಟ್ಟು ಪಾಪರಾಜಿಗಳೊಂದಿಗೆ ಜನುಮದಿನವನ್ನ ಸಂಭ್ರಮಿಸಿದರು.