ಸಿನಿಮಾ ಹಾಗೂ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಫ್ಯಾಷನ್ ನಿಯತಕಾಲಿಕೆ ವೋಗ್ ಆಸ್ಟ್ರೇಲಿಯಾದ ಜೂನ್ ತಿಂಗಳ ಆವೃತ್ತಿಯ ಮುಖಪುಟದಲ್ಲಿ ಮಿಂಚಲಿದ್ದಾರೆ.
ವೋಗ್ ಆಸ್ಟ್ರೇಲಿಯಾ ನಿಯತಕಾಲಿಕೆ ಮುಖಪುಟದಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಿಂಗ್! - ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ
ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಂತಾರಾಷ್ಟ್ರೀಯ ನಿಯತಕಾಲಿಕೆಗಳ ಫೋಟೋಶೂಟ್ಗಳಲ್ಲಿ ಮಿಂಚುತ್ತಿದ್ದು, ಸದ್ಯ ವೋಗ್ ಆಸ್ಟ್ರೇಲಿಯಾ ಮ್ಯಾಗ್ಜಿನ್ನ ಮುಖಪುಟದಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
priyanka
ವೋಗ್ ಆಸ್ಟ್ರೇಲಿಯಾದ ಕವರ್ ಪೇಜ್ಗಾಗಿ ಈಗಾಗಲೇ ಫೋಟೋಶೂಟ್ ಮಾಡಲಾಗಿದೆ. ಕವರ್ ಪೇಜ್ ಫೋಟೋಶೂಟ್ನ ಕೆಲವು ಚಿತ್ರಗಳನ್ನು ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟ್ನಲ್ಲಿ ಪ್ರಿಯಾಂಕಾ ಚೋಪ್ರಾ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅವರ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.