ಕರ್ನಾಟಕ

karnataka

ETV Bharat / sitara

ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್​ ಖಾನ್​ ಇನ್ನಿಲ್ಲ... - corona

ಕೆಲ ದಿನಗಳ ಹಿಂದಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ವಾಜಿದ್​ ಖಾನ್ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ.

Wajid Khan
ವಾಜಿದ್ ಖಾನ್​

By

Published : Jun 1, 2020, 6:37 AM IST

Updated : Jun 1, 2020, 9:58 AM IST

ಮುಂಬೈ: ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಬಾಲಿವುಡ್​​ ಸಂಗೀತ ನಿರ್ದೇಶಕ, ನಿರ್ದೇಶಕ, ಗಾಯಕ ವಾಜಿದ್​ ಖಾನ್​(42) ಅವರು ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ.

ವಾಜಿದ್ ಖಾನ್​ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲ ತಿಂಗಳುಗಳ ಹಿಂದಷ್ಟೇ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಮುಂಬೈನ ಚೆಂಬೂರ್​ನಲ್ಲಿರುವ ಸುರಾನಾ ಆಸ್ಪತ್ರೆಗೆ ದಾಖಲಾಗಿ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸಲ್ಮಾನ್​ ಖಾನ್​ ಚಿತ್ರಗಳಿಗೆ ಅತಿ ಹೆಚ್ಚು ಸಂಗೀತ ನಿರ್ದೇಶನ ಮಾಡಿರುವ ಇವರು ಇತ್ತೀಚೆಗೆ ''ಪ್ಯಾರ್​ ಕರೋನಾ'', ''ಭಾಯ್​ ಭಾಯ್​'' ಹಾಡುಗಳನ್ನು ರಚಿಸಿದ್ದರು. ತಮ್ಮ ಸಹೋದರ ಸಾಜಿದ್​ ಜತೆಗೂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದ ಕಾರಣದಿಂದ ಸಾಜಿದ್-ವಾಜಿದ್​ ದ್ವಯರೆಂದೇ ಬಾಲಿವುಡ್​ನಲ್ಲಿ ಪ್ರಖ್ಯಾತಿ ಗಳಿಸಿದ್ದರು.

1998ರಲ್ಲಿ ಬಾಲಿವುಡ್​ನಲ್ಲಿ ತಮ್ಮ ಕೆರಿಯರ್​ ಆರಂಭಿಸಿದ ವಾಜಿದ್ ಸಾವಿಗೆ ಬಾಲಿವುಡ್ ಗಣ್ಯರು ಹಾಗೂ ಸಿನಿ ಪ್ರಿಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಗ್​ ಬಿ ಅಮಿತಾಬ್​ ಬಚ್ಚನ್​ ಕೂಡಾ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ. ಬಾಲಿವುಡ್​ ನಗುಮುಖದ ಪ್ರತಿಭೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Last Updated : Jun 1, 2020, 9:58 AM IST

ABOUT THE AUTHOR

...view details