ಹೈದರಾಬಾದ್ :ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಭಾನುವಾರ (ಆಗಸ್ಟ್ 22) ರಣ್‍ವೀರ್ ಸಿಂಗ್ ತಾಯಿ ಅಂಜು ಭಾವನಾನಿಯವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಈ ದಿನದಂದು ರಣ್‍ವೀರ್ ಹಾಗೂ ದೀಪಿಕಾ ತಮ್ಮ ಆಪ್ತರಿಗೆ ಮುಂಬೈನ ವರ್ಲಿಯಾ ಬಾಸ್ಟಿಯನ್‍ನಲ್ಲಿ ಔತಣ ಕೂಟ ಏರ್ಪಡಿಸಿದ್ದರು. ಈ ವೇಳೆ ರಣ್‍ವೀರ್ ಸಿಂಗ್ ಬನಿಯನ್‍ನಲ್ಲಿ ದೀಪಿಕಾ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ರಣ್‍ವೀರ್ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ದೀಪಿಕಾ ಸೋಫಾ ಮೇಲೆ ಕುಳಿತುಕೊಂಡಿದ್ದಾರೆ. ಆಗ ರಣ್‍ವೀರ್ ದೀಪಿಕಾರನ್ನು ಮೆಚ್ಚಿಸಲು ಬನಿಯನ್‍ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ದೀಪಿಕಾ ರಣ್‍ವೀರ್ ಡ್ಯಾನ್ಸ್ ನೋಡಿ ನಾಚಿ ನೀರಾಗಿದ್ದಾರೆ.