ಮುಂಬೈ: ಬಾಲಿವುಡ್ ಅಂಗಳದಲ್ಲಿ ಈಗ ಬಿಸಿ ಬಿಸಿ ಚರ್ಚೆಯಾಗ್ತಿರೋದು ನಟ ವಿಕ್ಕಿ ಕೌಶಲ್ (Actor Vicky Kaushal) ಹಾಗೂ ಕತ್ರಿನಾ ಕೈಫ್ (Katrina Kaif) ಮದುವೆ ಬಗ್ಗೆ. ಆದರೆ ಇಬ್ಬರಲ್ಲೂ ಈ ಸುದ್ದಿಗೆ ಯಾವುದೇ ಉತ್ತರವಿಲ್ಲ. ನಿನ್ನೆ ನಟಿ ಸಾರಾ ಅಲಿ ಖಾನ್ (Sara Ali Khan) ಜೊತೆ ಕಾಣಿಸಿಕೊಂಡ ವಿಕ್ಕಿಗೆ ಪತ್ರಕರ್ತರೊಬ್ಬರು ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
‘ವಿಕ್ಕಿ ಸರ್ ನಿಮ್ಮ ಮದುವೆ ಯಾವಾಗ..?’ ಎಂದಾಗ, ನಟ ವಿಕ್ಕಿ ಹಾಗೂ ಸಾರಾ ಅಲಿ ಖಾನ್ ನಗುತ್ತಾ ಮುಂದೆ ಸಾಗಿದ್ದಾರೆ. ಆದರೆ, ವರದಿಗಳ ಪ್ರಕಾರ ವಿಕ್ಕಿ ಮತ್ತು ಕತ್ರಿನಾ ಇದೇ ಡಿಸೆಂಬರ್ನಲ್ಲಿ ವಿವಾಹವಾಗಲಿದ್ದಾರಂತೆ. ಹೀಗಂತ ಬಾಲಿವುಡ್ನಲ್ಲಿ ಸುದ್ದಿ ಜೋರಾಗಿದ್ದು, ಇಬ್ಬರು ಸಹ ವಿವಾಹಕ್ಕೆ ಒಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.