ಕರ್ನಾಟಕ

karnataka

ETV Bharat / sitara

'ದಿ ಫ್ಯಾಮಿಲಿ ಮ್ಯಾನ್‌' ಹೀರೊ ಶರೀಬ್​ ಹಷ್ಮಿ ಜೀವನವೇ ಒಂದು ಸಿನಿಮಾ..!

ದಿ ಫ್ಯಾಮಿಲಿ ಮ್ಯಾನ್‌ ಸ್ಟಾರ್‌ ನಟ ಶರೀಬ್‌ ಹಷ್ಮಿ ಅವರು ನಿಜ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಅನುಭವಿಸಿ ಇದೀಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರು ಸಿನಿ ಕ್ಷೇತ್ರಕ್ಕೆ ಕಾಲಿಟ್ಟ ರೋಚಕತೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Did you know The Family Man's JK debuted with this Oscar-winning film?
ದಿ ಫ್ಯಾಮಿಲಿ ಮ್ಯಾನ್‌ ಜೆಕೆ ಆಸ್ಕರ್‌ ವಿಜೇತ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದೇ ಒಂದು ರೋಚಕ...!

By

Published : Jun 14, 2021, 4:58 PM IST

ನವದೆಹಲಿ: ಚಿಕ್ಕವರಿದ್ದಾಗಲೇ ಕೆಲವರು ಸಿನಿಮಾದಲ್ಲಿ ನಟಿಸಬೇಕು, ಹೀರೊ ಆಗಿ ಮಿಂಚಬೇಕು ಎಂಬ ಕನಸುಗಳನ್ನು ಕಂಡಿರುತ್ತಾರೆ. ಅಂತಹ ನೂರಾರು ಕನಸುಗಳನ್ನು ಕಂಡಿದ್ದ ದಿ ಫ್ಯಾಮಿಲಿ ಮ್ಯಾನ್‌ ಸ್ಟಾರ್‌ ನಟ ಶರೀಬ್‌ ಹಷ್ಮಿ ಅವರ ನಿಜ ಜೀವನ ಕೂಡ ಒಂದು ಸಿನಿಮಾ ಮಾಡುವಂತಿದೆ. ಶರೀಬ್‌ ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳ ಬಳಿಕ ದಿ ಫ್ಯಾಮಿಲಿ ಮ್ಯಾನ್‌ ಆವೃತ್ತಿಯಲ್ಲಿ ಕೆಲಸ ಮಾಡಿದ ಬಳಿಕ ತಮ್ಮ ಜೀವನವನ್ನು ಸಖತ್ ಎಂಜಾಯ್‌ ಮಾಡ್ತಿದ್ದಾರೆ.

ಅಮೆಜಾನ್‌ ಫ್ರೈಮ್‌ ವಿಡಿಯೋ ಸಿರೀಸ್‌ನಲ್ಲಿ 45 ವರ್ಷದ ಶರೀಬ್‌ ಜೆಕೆ ತಲಪಾಡೆ ಅವರ ಪಾತ್ರದಲ್ಲಿ ಗುಪ್ತಚರ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಬಹು ಪ್ರೀತಿಯಿಂದ ಈ ಪಾತ್ರವನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶುಭಾಶಯ ಕೋರಿದ್ದಾರೆ. ಸಂದೇಶಗಳ ಮೂಲಕ ಅಭಿನಂದಿಸಿದ್ದಾರೆ. ಝೆಡ್​.ಎ. ಜೋಹಾರ್‌ ಅವರ ಪುತ್ರ ಶರೀಬ್‌ ಮುಂಬೈನಲ್ಲಿ ಜನಿಸಿದ್ದರು.

ಇದನ್ನೂ ಓದಿ: ಕೌನ್‌ ಬನೇಗಾ ಸಿಎಂ? ಎಲೆಕ್ಷನ್‌ಗೆ 2 ವರ್ಷವಿರುವಾಗ್ಲೇ ಕುರ್ಚಿಗಾಗಿ ಕೈ ಪಕ್ಷದೊಳಗೆ ತೆರೆಮರೆಯ ಪೈಪೋಟಿ

ತಮ್ಮ ತಂದೆಯೊಂದಿಗೆ ಸಾಕಷ್ಟು ಬಾಲಿವುಡ್‌ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ ಈತ, ಆಗಲೇ ತಾನು ಕೂಡ ಸಿನಿಮಾ ಕ್ಷೇತ್ರಕ್ಕೆ ಸೇರಬೇಕೆಂಬ ಕನಸು ಹೊತ್ತಿದ್ದರು. ಆದ್ರೆ ಒಬ್ಬ ನಟನಿಗೆ ಬೇಕಾದ ಎತ್ತರ ನಾನಿಲ್ಲ ಎಂದು ಭಾವಿಸಿದ್ರು. ಆದರೆ ಈತನಿಗಿದ್ದ ಮನರಂಜನೆಯ ಆಸಕ್ತಿ ಮೊದಲಿಗೆ ಬರವಣಿಗೆಯನ್ನು ಆರಂಭಿಸುವಂತೆ ಮಾಡಿತ್ತು. ಇವರು ಎಂಟಿವಿ ಹಾಗೂ ಚಾನಲ್‌ ವಿಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಎಂಟಿವಿಯಲ್ಲಿ ಬರುತ್ತಿದ್ದ ಪ್ರಾಂಕ್‌ ಕಾರ್ಯಕ್ರಮ ಎಂಟಿವಿ ಬಕ್ರಾ ಅತ್ಯಂತ ಜನಪ್ರಿಯವಾಗಿತ್ತು. ಇವರ ಕೌಶಲ್ಯವನ್ನು ಗಮನಿಸಿದ್ದ ನಿರ್ದೇಶಕ ಡ್ಯಾನಿ ಬೊಯೆಲ್‌ ಅವರ ಅಸ್ಕರ್‌ ವಿಜೇತ ಸಿನಿಮಾ ಸ್ಲಂ ಡಾಗ್‌ ಮಿಲೇನಿಯರ್‌ನಲ್ಲಿ ಅವಕಾಶ ನೀಡಿದ್ದರು.

ಇದನ್ನೂ ಓದಿ: ಜೂ. 16ರಂದು ಬೆಂಗಳೂರಿಗೆ ಬಿಜೆಪಿ ರಾಜ್ಯ ಉಸ್ತುವಾರಿ.. ಆಂತರಿಕ ಸಮಸ್ಯೆಗೆ ಬೀಳುತ್ತಾ ತೆರೆ?

ಭಾರತದ ಹಾಲಿವುಡ್‌ ಸಿಮಾನಿಗಳಿಗಾಗಿ ಆಡಿಷನ್‌ಗಳಲ್ಲಿ ನಡೆಸುವಂತೆ ಇವರ ಸ್ನೇಹಿತರೊಬ್ಬರು ಸಲಹೆ ನೀಡಿದ್ದರಂತೆ. 2018ರಲ್ಲಿ ಇವರ ಹಷ್ಮಿ ಅವರ ಹಾಲ್‌ ಇ ದಿಲ್‌ ಸಿನಿಮಾ ನಂತರ ಪೂರ್ಣ ಪ್ರಮಾಣದಲ್ಲಿ ಸಿನಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಳಿಕ ಇದರಿಂದ ಹೊರಬಂದು. ಆಡಿಷನ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಾದ್ರೂ, ಇದ್ಯಾವುದು ವರ್ಕೌಟ್‌ ಆಗಿಲ್ಲ. ಇದೇ ವೇಳೆ ಹಣಕಾಸಿನ ಮುಗ್ಗಟ್ಟು ಎದುರಾದ ಪರಿಣಾಮ ಅವರು ಮತ್ತೆ ಟೆವಿಲಿಷನ್‌ ಬರವಣಿಗೆಯತ್ತ ಮುಖ ಮಾಡಿದರು. ಇದಾದ ಕೆಲವೇ ದಿನಗಳಲ್ಲಿ 2012ರಲ್ಲಿ ಯಶ್‌ ಚೋಪ್ರಾ ಅವರ ರೋಮ್ಯಾನ್ಸ್‌ ಡ್ರಾಮಾ ಆಧಾರಿತ ಜಬ್‌ ತಕ್‌ ಹೈ ಜಾನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಇದರ ಮುಂದುವರೆದ ಭಾಗವಾಗಿ ನಿತಿನ್‌ ಕಾಕ್ಕರ್ಸ್‌ ಅವರ ಫಿಲ್ಮಿಸ್ತಾನ್‌ನಲ್ಲಿ ನಟಿಸಿದರು. ಅದೇ ವರ್ಷದಲ್ಲಿ ಈ ಸಿನಿಮಾ ಕೂಡ ಬಿಡುಗಡೆಯಾಗಿ ಎರಡರಲ್ಲಿನ ಅಭಿನಯವನ್ನು ಪ್ರೇಕ್ಷಕ ಮೆಚ್ಚುಕೊಂಡಿದ್ದ. ಬಳಿಕ ಇವರು ಹಿಂತಿರುಗಿ ನೋಡಲೇ ಇಲ್ಲ. ಫ್ಯಾಮಿಲಿ ಮ್ಯಾನ್‌-2ರ ವರೆಗೆ ನಟನೆಯಲ್ಲಿ ಸದಾ ಬ್ಯುಸಿಯಾದರು. ಸದ್ಯ ವೆಬ್‌ ಸಿರೀಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಜೆಪಿ ದೊಡ್ಡ ಅಭಿಮಾನಿ ಬಳಗಳವನ್ನೇ ಹೊಂದಿದ್ದಾರೆ.

ABOUT THE AUTHOR

...view details