ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಮರೆಯುವ ಮುನ್ನವೇ ಹಿಂದಿ ಕಿರುತೆರೆಗೆ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಬರಸಿಡಿಲು ಬಡಿದಂತಾಗಿದೆ. ಹಿಂದಿ ಕಿರುತೆರೆ ನಟ ಸಮೀರ್ ಶರ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ.
44 ವರ್ಷದ ಸಮೀರ್ ಶರ್ಮ, ನಿನ್ನೆ ಮುಂಬೈನ ಪಶ್ಚಿಮ ಮಲಾಡ್ನ ತಮ್ಮ ನೇಹಾ ಸಿಹೆಚ್ಎಸ್ ಅಪಾರ್ಟ್ಮೆಂಟ್ನ ಅಡುಗೆ ಮನೆಯ ಸೀಲಿಂಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎನ್ನಲಾಗಿದೆ. ಹಿಂದಿ ಕಿರುತೆರೆಯ 'ಯೇ ರಿಶ್ತಾ ಹೆ ಪ್ಯಾರ್ ಕೆ' ಧಾರಾವಾಹಿಯಲ್ಲಿ ಕುಹೂ ತಂದೆ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತರಾಗಿದ್ದರು. ನಿನ್ನೆ ರಾತ್ರಿ ಅಡುಗೆ ಮನೆಯ ಸೀಲಿಂಗ್ನಲ್ಲಿ ಸಮೀರ್ ಶರ್ಮ ದೇಹ ನೇತಾಡುತ್ತಿದ್ದನ್ನು ಕಂಡ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್, ಅಪಾರ್ಟ್ಮೆಂಟ್ ಮೇಲ್ವಿಚಾರಕನಿಗೆ ಕರೆ ಮಾಡಿದ್ದಾರೆ. ನಂತರ ಆತ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸಮೀರ್ ಆತ್ಮಹತ್ಯೆ ಮಾಡಿಕೊಂಡ ಕೋಣೆಯಲ್ಲಿ ಯಾವುದೇ ಡೆತ್ ನೋಟ್ ದೊರೆತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.