ನಿನ್ನೆ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಅಕ್ಷಯ ಕುಮಾರ್ ಸಂದರ್ಶಿಸಿದ್ದರು. ಇದು ರಾಜಕೀಯೇತರ ಮಾತುಕತೆಯಾಗಿತ್ತು. ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ನಾಯಕರ ಜತೆ ತಮ್ಮ ಸ್ನೇಹ, ಹೀಗೆ ಹಲವಾರು ಸಂಗತಿಗಳನ್ನು ಅಕ್ಷಯ್ ಎದುರು ಹಂಚಿಕೊಂಡಿದ್ದರು ಮೋದಿ..
ಮೋದಿ ಸಂದರ್ಶನ... ಅಕ್ಷಯ್ ಕುಮಾರ್ ವಿರುದ್ಧ ಸಿಡಿದೆದ್ದ ನಟ ಸಿದ್ದಾರ್ಥ್ - ಬಾಲಿವುಡ್ ನಟ
ಮೋದಿ ಸಂದರ್ಶನ ನಡೆಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿರುದ್ಧ ತಮಿಳು ನಟ ಸಿದ್ಧಾರ್ಥ್ ಗರಂ ಆಗಿದ್ದಾರೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಖಿಲಾಡಿ ವಿರುದ್ಧ ಹರಿಹಾಯ್ದಿದ್ದಾರೆ.
ಅಕ್ಷಯ್ ವಿರುದ್ಧ ಸಿಡಿದ ಸಿದ್ದಾರ್ಥ್
ಇದೀಗ ಈ ಸಂದರ್ಶನದ ವಿರುದ್ಧ ಸಿದ್ಧಾರ್ಥ್ ಕಿಡಿ ಕಾರಿದ್ದಾರೆ. ನೇರವಾಗಿ ಅಕ್ಷಯ್ ಮೇಲೆಯೇ ದಾಳಿ ಮಾಡಿರುವ ಅವರು, 'ಅಕ್ಷಯ್ ಕುಮಾರ್ ಒಬ್ಬ ಬೆಲೆ ಅರಿಯದ ವಿಲನ್' ಎಂದು ಜರಿದಿದ್ದಾರೆ.
ಇನ್ನು ಸಿದ್ಧಾರ್ಥ್ ಈ ಟೀಕೆಯ ಟ್ವೀಟ್ ಸಂಚಲನ ಮೂಡಿಸಿದೆ. ಕೆಲವರು ವಿನಾಕಾರಣ ಮೋದಿಯನ್ನೇ ಏಕೆ ದ್ವೇಷಿಸುತ್ತೀರಾ ಎಂದು ಪ್ರಶ್ನಿಸಿದ್ದರೆ, ಇನ್ನ ಕೆಲವರು ಸಿದ್ಧಾರ್ಥ್ ಟೀಕೆ ಸಮರ್ಥಿಸಿಕೊಂಡಿದ್ದಾರೆ.
Last Updated : Apr 25, 2019, 2:52 PM IST