ಮುಂಬೈ: ಬಾಲಿವುಡ್ ಸೆಲೆಬ್ರಿಟಿಗಳಾದ ನಟಿ ಸಾರಾ ಅಲಿ ಖಾನ್, ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್ ಡಿಸೈನರ್ ಸಿಮೋನೆ ಖಂಬಟ್ಟಾ ಇವರಿಗೆ ಶೀಘ್ರದಲ್ಲೇ ನೋಟಿಸ್ ನೀಡಲಾಗುವುದು ಎಂದು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಉಪ ನಿರ್ದೇಶಕ ಕೆ.ಪಿ.ಎಸ್. ಮಲ್ಹೋತ್ರಾ ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದ್ದು, ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಅರೆಸ್ಟ್ ಆಗಿರುವ ನಟಿ ರಿಯಾ ಚಕ್ರವರ್ತಿ ಎನ್‌ಸಿಬಿ ವಿಚಾರಣೆ ವೇಳೆ ಕೆಲವು ಖ್ಯಾತ ನಟ-ನಟಿಯರು, ನಿರ್ಮಾಪಕರು ಮತ್ತು ನಿರ್ದೇಶಕರ ಹೆಸರನ್ನು ಹೇಳಿದ್ದಾರೆ. ಈ ಹಿಟ್-ಲಿಸ್ಟ್ನಲ್ಲಿ 20ಕ್ಕೂ ಹೆಚ್ಚು ಬಾಲಿವುಡ್ ತಾರೆಗಳಿದ್ದಾರೆ ಎಂದು ಹೇಳಲಾಗಿದೆ.