ಹೈದರಾಬಾದ್ (ತೆಲಂಗಾಣ) :ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸದ್ಯದಲ್ಲೇ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದು, ಅದಕ್ಕೆ ಪೂರ್ವ ತಯಾರಿ ನಡೆದಿದೆ.
ಸ್ಟಾರ್ ನಟರ ಪುತ್ರಿಯಾಗಿರುವ ಸುಹಾನಾ ಖ್ಯಾತ ನಿರ್ಮಾಪಕರೊಬ್ಬರ ಚಿತ್ರದೊಂದಿಗೆ ಬಾಲಿವುಡ್ಗೆ ಪ್ರವೇಶ ಮಾಡಲಿದ್ದಾರೆಂಬ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಿದೆ. ಇತ್ತೀಚೆಗೆ ಖಾನ್ ಪುತ್ರಿ ನಿರ್ಮಾಪಕ ಜೋಯಾ ಅಖ್ತರ್ ಅವರ ಕಚೇರಿಗೆ ಭೇಟಿ ನೀಡಿದ್ದು, ಅಲ್ಲಿಂದ ಹೊರ ಬರುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಫೋಟೋ ಸದ್ಯದಲ್ಲೇ ಚಿತ್ರೀಕರಣಕ್ಕೆ ಧುಮುಕಲಿದ್ದಾರೆ ಎಂಬುದನ್ನು ಖಚಿತಪಡಿಸುತ್ತಿದೆ. ಇದು ಅಂತಾರಾಷ್ಟ್ರೀಯ ಕಾಮಿಕ್ ಪುಸ್ತಕ ಆರ್ಚಿಯ ರೂಪಾಂತರ ಕಥೆಯಾಗಿದ್ದು, ಭಾರತೀಯ ಆವೃತ್ತಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಈ ಬಗ್ಗೆ ನಟಿಯಾಗಲಿ ಅಥವಾ ನಿರ್ಮಾಪಕರಾಗಲಿ ಸ್ಪಷ್ಟನೆ ನೀಡಿಲ್ಲ. ಆದರೆ, ಅವರ ಭೇಟಿ ಮಾತ್ರ ಖಚಿತಪಡಿಸಿದೆ.
ಫೆಬ್ರವರಿ 4ರಂದು ಸುಹಾನಾ ಮುಂಬೈನಲ್ಲಿರುವ ನಿರ್ಮಾಪಕ ಜೋಯಾ ಅಖ್ತರ್ ಅವರ ಕಚೇರಿಯಿಂದ ಹೊರ ಹೋಗುತ್ತಿವುದನ್ನು ಗಮನಸಿದರೆ ಅವರು ಸಿನಿಮಾದಲ್ಲಿ ನಟಿಸುವುದು ಖಚಿತ ಎನ್ನಲಾಗುತ್ತಿದೆ. ಓರ್ವ ಹುಡುಗನ ಜೊತೆ ಕಚೇರಿಯಿಂದ ಹೆಜ್ಜೆ ಹಾಕುತ್ತಿರುವ ಫೋಟೋ ಜಾಲತಾಣದಲ್ಲಿ ಈಗ ಅನುಮಾನ ಹುಟ್ಟು ಹಾಕಿದೆ.