ಕರ್ನಾಟಕ

karnataka

ETV Bharat / sitara

ಶ್ರೀದೇವಿ, ಜಾಹ್ನವಿ ಕಪೂರ್​ 2016ರ ಫೋಟೊ ವೈರಲ್ ! - ಸೋಶಿಯಲ್​ ಮೀಡಿಯಾ

2016 ರಲ್ಲಿ ಜಾಹ್ನವಿ ಕಪೂರ್ ತಾಯಿ ದಿ. ಶ್ರೀದೇವಿ ಶೇರ್ ಮಾಡಿದ್ದ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶ್ರೀದೇವಿ ತಮ್ಮ ಅಧಿಕೃತ ಟ್ವಿಟರ್ ಅಕೌಂಟಿನಿಂದ 2016ರ ಮಾ.6 ರಂದು ಈ ಫೋಟೊ ಹಂಚಿಕೊಂಡಿದ್ದು, "ಮಿಸ್ಸಿಂಗ್ ಯೂ ಜಾನೂ, ಹ್ಯಾಪ್ಪಿ ಬರ್ಥ್​​ ಡೇ ಜಾಹ್ನವಿ" ಎಂದು ಬರೆದಿದ್ದರು.

Sridevi birthday post for Janhvi
Sridevi birthday post for Janhvi

By

Published : Apr 22, 2020, 5:15 PM IST

ಮುಂಬೈ: ಜಾಹ್ನವಿ ಕಪೂರ ಅವರ ಹಳೆಯ ಫೋಟೊವೊಂದು ಈಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 2016 ರಲ್ಲಿ ಜಾಹ್ನವಿ ಕಪೂರ್ ತಾಯಿ ದಿ. ಶ್ರೀದೇವಿ ಶೇರ್ ಮಾಡಿದ್ದ ಫೋಟೊ ಇದಾಗಿದೆ.

2016ರಲ್ಲಿ ತಾಯಿ ಶ್ರೀದೇವಿಯೊಂದಿಗೆ ಇರುವ ಜಾಹ್ನವಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಆಗ ಇನ್ನೂ ಚಿಕ್ಕವಳಾಗಿದ್ದ ಜಾಹ್ನವಿ ತಾಯಿಯೊಂದಿಗೆ ಅತ್ಯಂತ ಖುಷಿಯಲ್ಲಿರುವ ಕ್ಷಣ ಮತ್ತೊಮ್ಮೆ ಎಲ್ಲರಿಗೂ ಇಷ್ಟವಾಗುತ್ತಿದೆ. ಖ್ಯಾತ ನಟಿ ಶ್ರೀದೇವಿ ತಮ್ಮ ಅಧಿಕೃತ ಟ್ವಿಟರ್ ಅಕೌಂಟಿನಿಂದ 2016ರ ಮಾ.6 ರಂದು ಈ ಫೋಟೊ ಹಂಚಿಕೊಂಡಿದ್ದು, "ಮಿಸ್ಸಿಂಗ್ ಯೂ ಜಾನೂ, ಹ್ಯಾಪ್ಪಿ ಬರ್ಥ್​ ಡೇ ಜಾಹ್ನವಿ" ಎಂದು ಬರೆದಿದ್ದರು.

ಬಹುಶಃ ಅವತ್ತು ಮಗಳಿಂದ ದೂರವಿದ್ದ ತಾಯಿ ಶ್ರೀದೇವಿ ಮಿಸ್ಸಿಂಗ್ ಯೂ ಅಂತ ಬರೆದಿದ್ದರು. ಜಾಹ್ನವಿ ಅಭಿಮಾನಿಗಳು ಸದ್ಯ ಈ ಫೋಟೊವನ್ನು ವೈರಲ್ ಮಾಡಿದ್ದಾರೆ.

ABOUT THE AUTHOR

...view details