ನಟಿ ಕೈರಾ ಅಡ್ವಾಣಿ ಜತೆ ಡೇಟಿಂಗ್ ರೂಮರ್ ಬಗ್ಗೆ ಬಾಲಿವುಡ್ ಹ್ಯಾಂಡ್ಸಮ್ಗಾಯ್ ಸಿದ್ಧಾರ್ಥ್ ಮಲ್ಹೋತ್ರಾ ಕೊನೆಗೂ ಮೌನ ಮುರಿದಿದ್ದಾರೆ.
ಈ ಮೊದಲು ಸಿದ್ಧಾರ್ಥ್ ಹೆಸರು ಆಲಿಯಾ ಭಟ್ ಜತೆ ಲಿಂಕ್ ಆಗಿತ್ತು. ಈ ತಾರೆಯರಿಬ್ಬರು ಡೇಟಿಂಗ್ನಲ್ಲಿದ್ದಾರೆ ಎನ್ನುವ ಗುಸು-ಗುಸು ದಟ್ಟವಾಗಿಯೇ ಕೇಳಿಬಂದಿತ್ತು. ಆದರೆ,ಇತ್ತೀಚಿಗೆ ಕೈರಾ ಅಡ್ವಾಣಿ ಜತೆ ಈ ನಟನ ಹೆಸರು ಸೇರಿಕೊಂಡಿತು. ಕಬೀರ್ ಸಿಂಗ್ ಚೆಲುವೆ ಕೈರಾ ಜತೆ ಸಿದ್ಧಾರ್ಥ್ ರಿಲೇಷನ್ಶಿಪ್ನಲ್ಲಿದ್ದಾರೆ ಎನ್ನುವ ರೂಮರ್ ಹರಿದಾಡಲು ಶರುವಾಯಿತು. ಈ ವದಂತಿ ಮತ್ತಷ್ಟು ಬಲಗೊಂಡಿದ್ದು, ಈ ಜೋಡಿ ಶೇರ್ ಷಾ ಚಿತ್ರದಲ್ಲಿ ಒಟ್ಟಿಗೆ ನಟಿಸಲು ಒಪ್ಪಿಕೊಂಡಾಗ.