ಮುಂಬೈ:ಬಾಲಿವುಡ್ ಚಲನಚಿತ್ರ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರ ಪ್ರೊಡಕ್ಷನ್ ಹೌಸ್ ಇತಿಹಾಸ ಬರಹಗಾರ ವಿಲಿಯಂ ಡಾಲ್ರಿಂಪಲ್ ಅವರ ಐತಿಹಾಸಿಕ ಮಹಾಕಾವ್ಯವಾದ 'ದಿ ಅನಾರ್ಕಿ: ದಿ ರಿಲೆಂಟ್ಲೆಸ್ ರೈಸ್ ಆಫ್ ದಿ ಈಸ್ಟ್ ಇಂಡಿಯಾ ಕಂಪನಿ'ಯ ಹಕ್ಕುಗಳನ್ನು ಪಡೆದುಕೊಂಡಿದೆ.
'ದಿ ಅನಾರ್ಕಿ' ಪುಸ್ತಕದ ಹಕ್ಕು ಪಡೆದುಕೊಂಡ ಸಿದ್ಧಾರ್ಥ ರಾಯ್ ಕಪೂರ್ ಪ್ರೊಡಕ್ಷನ್ ಹೌಸ್
ವಿಲಿಯಂ ಡಾಲ್ರಿಂಪಲ್ ಅವರ ಐತಿಹಾಸಿಕ ಮಹಾ ಕಾವ್ಯವಾದ 'ದಿ ಅನಾರ್ಕಿ: ದಿ ರಿಲೆಂಟ್ಲೆಸ್ ರೈಸ್ ಆಫ್ ದಿ ಈಸ್ಟ್ ಇಂಡಿಯಾ ಕಂಪನಿ'ಯ ಹಕ್ಕುಗಳನ್ನು ಸಿದ್ಧಾರ್ಥ್ ರಾಯ್ ಕಪೂರ್ ಅವರ ಪ್ರೊಡಕ್ಷನ್ ಹೌಸ್ ಪಡೆದುಕೊಂಡಿದೆ.
anarchy book
ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವಿಟರ್ನಲ್ಲಿ ಈ ಘೋಷಣೆ ಮಾಡಿದ್ದಾರೆ. ರಾಯ್ ಕಪೂರ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಈ ಪುಸ್ತಕವನ್ನು ಸಿರೀಸ್ಗೆ ಅಳವಡಿಸಲಿದೆ ಎಂದು ಬಹಿರಂಗಪಡಿಸಿದ್ದಾರೆ.
2019ರಲ್ಲಿ ಬಿಡುಗಡೆಯಾದ ಈ ಪುಸ್ತಕವು 18ನೇ ಶತಮಾನದ ದ್ವಿತೀಯಾರ್ಧದಲ್ಲಿ ಮೊಘಲ್ ಸಾಮ್ರಾಜ್ಯದ ಪತನದ ಹಿನ್ನೆಲೆಯಲ್ಲಿ ಈಸ್ಟ್ ಇಂಡಿಯಾ ಕಂಪನಿ ಹೇಗೆ ಪ್ರಾಮುಖ್ಯತೆ ಪಡೆಯಿತು ಎಂಬುದನ್ನು ವಿವರಿಸುತ್ತದೆ.