ಕರ್ನಾಟಕ

karnataka

ETV Bharat / sitara

ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ ಶಿಲ್ಪಾ ಶೆಟ್ಟಿ - ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮುಂದಿನ ಸಿನಿಮಾ

ಮಂಗಳೂರಿನ ಬೆಡಗಿ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಟೈಟಲ್‌ ಘೋಷಿಸಿದ್ದಾರೆ.

Shilpa Shetty to headline upcoming film Sukhee, first look out
29 ವರ್ಷದ ಸಿನಿ ಕೆರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಶಿಲ್ಪಾ ಶೆಟ್ಟಿ..!

By

Published : Mar 2, 2022, 4:44 PM IST

ಹೈದರಾಬಾದ್ (ತೆಲಂಗಾಣ): ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ತಮ್ಮ ಹೊಸ ಸಿನಿಮಾದ ಟೈಟಲ್‌ ಪ್ರಕಟಿಸಿದ್ದಾರೆ. ಮಹಿಳಾ ಪ್ರಧಾನವಾಗಿರುವ ಈ ಚಿತ್ರಕ್ಕೆ 'ಸುಖಿ' ಎಂದು ಹೆಸರಿಡಲಾಗಿದೆ.

1993ರಲ್ಲಿ ಬಾಜಿಗರ್‌ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ನಂತರ ಇದು ಶಿಲ್ಪಾ ಶೆಟ್ಟಿ ಅವರ ಮೊದಲ ಮಹಿಳಾಕೇಂದ್ರಿತ ಚಿತ್ರವಾಗಿರುವುದು ವಿಶೇಷ. ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದು, ನನ್ನ ಮುಂದಿನ ಸಿನಿಮಾವನ್ನು ಘೋಷಿಸುತ್ತಿರುವುದಕ್ಕೆ ಥ್ರಿಲ್‌ ಆಗುತ್ತಿದೆ ಎಂದಿದ್ದಾರೆ.

ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಮತ್ತು ಟಿ-ಸೀರೀಸ್ ಈ ಚಿತ್ರ ನಿರ್ಮಿಸಲು ಕೈಜೋಡಿಸಿವೆ. ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್‌ನ ಸಂಸ್ಥಾಪಕ ವಿಕ್ರಮ್ ಈ ಹಿಂದೆ ಶೆರ್ನಿ, ಶಕುಂತಲಾ ದೇವಿ ಸೇರಿದಂತೆ ಹೆಚ್ಚಿನ ಮಹಿಳಾ ಕೇಂದ್ರಿತ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಹೊಸ ಚಿತ್ರವನ್ನು ಸೋನಾಲ್ ಜೋಶಿ ನಿರ್ದೇಶಿಸುತ್ತಿದ್ದಾರೆ. ಜೋಶಿ ಈ ಹಿಂದೆ ಧೂಮ್ 3 ಮತ್ತು ಜಬ್ ಹ್ಯಾರಿ ಮೆಟ್ ಸೇಜಲ್ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು. ಶಿಲ್ಪಾ ಶೆಟ್ಟಿ ಪ್ರಸ್ತುತ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಹಿರಿಯ ನಟ ಕಿರಣ್ ಖೇರ್, ರಾಪರ್ ಬಾದ್‌ಶಾ ಮತ್ತು ಬರಹಗಾರ ಮನೋಜ್ ಮುಂತಾಶಿರ್ ಅವರೊಂದಿಗೆ ತೀರ್ಪುಗಾರರಾಗಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಶಾರೂಖ್​ ಪುತ್ರನಿಗೆ ಬಿಗ್​ ರಿಲೀಫ್​.. ಆರ್ಯನ್ ಖಾನ್​​ ವಿರುದ್ಧ ಯಾವುದೇ ಸಾಕ್ಷಿ ಇಲ್ಲ ಎಂದ ಎನ್​ಸಿಬಿ

ABOUT THE AUTHOR

...view details