ಮುಂಬೈ (ಮಹಾರಾಷ್ಟ್ರ):ಪ್ರತಿ ವರ್ಷ ಮನೆಯಲ್ಲಿ ಗಣಪತಿ ಮೂರ್ತಿ ತಂದು ವಿಜೃಂಭಣೆಯಿಂದ ಕುಟುಂಬ ಸಮೇತ ಗಣೇಶ ಚತುರ್ಥಿ ಆಚರಿಸುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಪತಿ ರಾಜ್ ಕುಂದ್ರಾ ಅನುಪಸ್ಥಿತಿಯಲ್ಲಿ ಮಕ್ಕಳೊಂದಿಗೆ ಹಬ್ಬ ಆಚರಿಸಿದ್ದಾರೆ.
ನಿನ್ನೆಯಷ್ಟೇ ಗಣೇಶನ ಮೂರ್ತಿ ಖರೀದಿಸಿದ್ದ ಶಿಲ್ಪಾ ಶೆಟ್ಟಿ, 'ಗಣಪತಿ ಬಪ್ಪಾ ಮೋರಯಾ' ಎಂದು ಜಯಘೋಷ ಹಾಕುತ್ತಾ ತಮ್ಮ ಮನೆಗೆ ಗಣೇಶನನ್ನು ಬರಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇಂದು ಶಾಸ್ತ್ರೋಕ್ತವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ನಟಿ, ಮಕ್ಕಳಾದ ವಿಯಾನ್, ಸಮೀಷಾ ಜೊತೆ ಹಬ್ಬ ಆಚರಣೆ ಮಾಡಿದ್ದಾರೆ.
ಗಣೇಶ ಚತುರ್ಥಿ ಆಚರಣೆಯ ಫೋಟೋಗಳನ್ನು ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಒಂದು ಫೋಟೋದಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಮಕ್ಕಳಿಗೆ ಲಡ್ಡು ತಿನಿಸುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಅಮ್ಮ-ಮಗಳು ಇಬ್ಬರೂ ಗುಲಾಬಿ ಬಣ್ಣದ ಒಂದೇ ರೀತಿಯ ಉಡುಪು ಧರಿಸಿದ್ದಾರೆ.