ಕರ್ನಾಟಕ

karnataka

ETV Bharat / sitara

ಪರ್ವತಾರೋಹಿ ಸಿಲ್ವಿಯಾ ಜೀವನಾಧಾರಿತ ಪಾತ್ರದಲ್ಲಿ ಹಾಲಿವುಡ್‌ ನಟಿ ಸೆಲೆನಾ! - ಪರ್ವತಾರೋಹಿ‌ ಸಿಲ್ವಿಯಾ

ಹಾಲಿವುಡ್‌ ಸಿಂಗರ್‌ ಕಂ ನಟಿ ಸೆಲೆನಾ ಗೊಮೆಜ್ ಪರ್ವತಾರೋಹಿ‌ ಸಿಲ್ವಿಯಾ ವಾಸ್ಕ್ವೆಜ್‌ ಲಾವಾಡೋ ಅವರ ಜೀವನಾಧಾರಿತ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

selena-gomez-set-to-play-trailblazing-mountaineer-silvia-vasquez-lavado-in-biopic
ಪರ್ವತಾರೋಹಿ ಸಿಲ್ವಿಯಾ ಜೀವನಾಧಾರಿತ ಪಾತ್ರದಲ್ಲಿ ಹಾಲಿವುಡ್‌ ನಟಿ ಸೆಲೆನಾ!

By

Published : Nov 12, 2020, 1:17 PM IST

ಲಾಸ್ ಏಂಜಲೀಸ್: ಪೆರು ಮೂಲದ ಅಮೆರಿಕನ್‌, ಮೌಂಟೇನರ್‌ ಸಿಲ್ವಿಯಾ ವಾಸ್ಕ್ವೆಜ್-ಲಾವಾಡೋ ‌ಅವರ ಪಾತ್ರಕ್ಕೆ ಹಾಲಿವುಡ್‌ ಸಿಂಗರ್‌ ಕಂ ನಟಿ ಸೆಲೆನಾ ಗೊಮೆಜ್ ಬಣ್ಣ ಹಚ್ಚಲಿದ್ದಾರೆ.

ಸಾಮಾಜಿಕ ಉದ್ಯಮಿಯೂ ಆಗಿರುವ ಲಾವಾಡೋ ಅವರ ಜೀವನಾಧಿರಿತ ಚಿತ್ರದಲ್ಲಿ ನಟಿ ಸೆಲೆನಾ ಗೊಮೆಜ್‌ ನಟಿಸಲಿದ್ದಾರೆ ಎಂದು ಹಾಲಿವುಡ್‌ ಮೂಲಗಳು ಸ್ಪಷ್ಟಪಡಿಸಿವೆ. 'ಇನ್‌ ದಿ ಶಾಡೋ ಆಫ್‌ ದಿ ಮೌಂಟೈನ್' ಸಿನಿಮಾಗೆ ಹೆಸರಿಡಲಾಗಿದ್ದು, ಎಲ್ಜಿನ್ ಜೇಮ್ಸ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಎವರೆಸ್ಟ್‌ ಶಿಖರ ಏರಿದ ಪೆರುವಿನ ಮೊದಲ ಮಹಿಳೆ ಇವರಾಗಿದ್ದಾರೆ. ಮಾತ್ರವಲ್ಲದೇ 7 ಬಾರಿ ಈ ಶಿಖರವನ್ನು ಏರಿದ ಮೊದಲ ಸಲಿಂಗಕಾಮಿ ಮಹಿಳೆಯ ಇವರಾಗಿದ್ದಾರೆ. ಒಂದು ಸಮುದಾಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

ಮಿಚೆಲ್‌ ಬಿ ಜೋರ್ಡನ್ಸ್‌ ಅವರ ಲೀಗಲ್‌ ಡ್ರಾಮಾ ಮೆರ್ಸಿಯಲ್ಲಿ ಈಕೆಯ ಬಾಲ್ಯದ ಜೀವನವನ್ನು ತೋರಿಸಲಾಗಿತ್ತು. ಬಾಲ್ಯದಲ್ಲೇ ದೌರ್ಜನ್ಯಕ್ಕೊಳಗಾಗಿ ಸಮಾಜದಿಂದ ತಿರಸ್ಕಾರಕ್ಕೆ ಒಳಗಾಗಿದ್ದರು. ಬಳಿಕ ಎವರೆಸ್ಟ್‌ ಶಿಖರ ಏರುವ ಮೂಲಕ ತನ್ನ ಶಕ್ತಿ ಏನೆಂಬುದನ್ನು ಇಡೀ ಜಗತ್ತಿಗೆ ತೋರಿಸಿದ್ದ ದಿಟ್ಟ ಮಹಿಳೆ ಈಕೆ. ಸದ್ಯ ಈ ಡ್ರಾಮಾವನ್ನು ಆಧಾರವಾಗಿಟ್ಟುಕೊಂಡು ಸಿಲ್ವಿಯಾ ನಡೆದು ಬಂದ ಹಾದಿಯ ಬಗ್ಗೆ 'ಇನ್‌ ದಿ ಶಾಡೋ ಆಫ್‌ ದಿ ಮೌಂಟೈನ್'ನಲ್ಲಿ ತೋರಿಸಲಾಗುತ್ತದೆ ಎನ್ನಲಾಗುತ್ತಿದೆ.

ಆಸ್ಕರ್‌ ವಿನ್ನರ್‌ ಡೊನ್ನಾ ಗಿಗ್ಲಿಯೊಟ್ಟಿ ಅವರ ಟೆಂಪೆಸ್ಟಾ ಫಿಲಂಮ್ಸ್‌ ಬ್ಯಾನರ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ABOUT THE AUTHOR

...view details