ಕರ್ನಾಟಕ

karnataka

ETV Bharat / sitara

ಇನ್​​ಸ್ಟಾಗ್ರಾಮ್​ನಲ್ಲಿ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಂತಾ.. ಆದ್ರೆ ನಾಗಚೈತನ್ಯ...? - ಸಮಂತಾ ನಾಗ ಚೈತನ್ಯ ಸಂದರ್ಶನ

2021ರಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಜೋಡಿಯ ವಿಚ್ಛೇದನದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಇವರಿಬ್ಬರೂ ತಮ್ಮ ವೈವಾಹಿಕ ಜೀವನದಿಂದ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ಈ ವಿಚಾರ ತಿಳಿದ ಅಭಿಮಾನಿಗಳಿಗೆ ಆಘಾತವಾಗಿತ್ತು. ಇನ್​​​​​ಸ್ಟಾಗ್ರಾಂ​ನಲ್ಲಿ ಈಗ ಸಮಂತಾ ತನ್ನ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ್ದಾರೆ. ಆದರೆ ನಾಗ ಚೈತನ್ಯ ಮಾತ್ರ ಫಾಲೋ ಮಾಡ್ತಾನೇ ಇದ್ದಾರೆ.

samantha ruth prabhu  naga chaitanya  samantha unfollows naga  Samantha and naga chaitanya birthday  samantha tweet about naga chaitanya  samantha naga chaitanya photo  samantha naga chaitanya instagram  samantha on naga chaitanya  samantha on naga chaitanya  samantha naga chaitanya interview  samantha with naga chaitanya movies  samantha akkineni movies with naga chaitanya  ಇನ್ಸ್ಟಾಗ್ರಾಮ್​ನಲ್ಲಿ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಾಂತ  ಮಾಜಿ ಹೆಂಡ್ತಿ ಸಮಂತಾಳನ್ನು ಫಾಲೋ ಮಾಡುತ್ತಿರುವ ನಾಗ ಚೈತನ್ಯ  ಸಮಂತಾ ನಾಗ ಚೈತನ್ಯ ಸಂದರ್ಶನ  ಸಮಂತಾ ನಾಗ ಚೈತನ್ಯ ವಿಚ್ಛೇದನಾ ಸುದ್ದಿ
ಇನ್ಸ್ಟಾಗ್ರಾಮ್​ನಲ್ಲಿ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಾಂತ

By

Published : Mar 24, 2022, 9:44 AM IST

ಮುಂಬೈ:ತಮ್ಮಮದುವೆ ನಾಲ್ಕನೇ ವಾರ್ಷಿಕೋತ್ಸವದ ಮುನ್ನವೇ ಸ್ಯಾಮ್ ಹಾಗೂ ಚೈ ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು. ವಿಚ್ಛೇದನಾ ಬಳಿಕ ಮನ ನೊಂದಿರುವ ಸಮಂತಾ ತಮ್ಮ ಸಂಬಂಧದ ಗುರುತುಗಳನ್ನು ಉಳಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಈ ಮೊದಲ ಸ್ಯಾಮ್​ ಮತ್ತು ಚೈ ಜೊತೆಗಿದ್ದ ಫೋಟೋಗಳು ಮತ್ತು ವಿಡಿಯೋಗಳನ್ನು ಡಿಲೀಟ್​ ಮಾಡಿದ್ದರು. ಈಗ ಇನ್​ಸ್ಟಾಗ್ರಾಂನಲ್ಲಿ ನಾಗ ಚೈತನ್ಯ ಅವರನ್ನು ಸ್ಯಾಮ್ ಅನ್​ಫಾಲೋ ಮಾಡಿದ್ದಾರೆ.

ಇನ್ಸ್ಟಾಗ್ರಾಮ್​ನಲ್ಲಿ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಾಂತ

2010ರಿಂದ ‘ಯೇ ಮಾಯಾ ಚೇಸಾವೆ’ ಚಿತ್ರದಿಂದ ಆರಂಭವಾದ ಸ್ನೇಹ, ವಿವಾಹ ಬಾಂಧವ್ಯಕ್ಕೆ ತಿರುಗಿ ಅಲ್ಲಿಂದ ಬೇರ್ಪಡುವುದರೊಂದಿಗೆ ಅಂತ್ಯವಾಗಿತ್ತು. ಸಮಂತಾ ಹಾಗೂ ನಾಗ ಚೈತನ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ, ವೃತ್ತಿ ಜೀವನದಲ್ಲಿ ಇಬ್ಬರ ಹಾದಿ ಭಿನ್ನ ಎಂದು ಅರಿತುಕೊಂಡ ನಂತರ ಬೇರೆಯಾಗುವ ನಿರ್ಧಾರ ಘೋಷಿಸಿದ್ದರು.

ಓದಿ:ಖಾತೆಗೆ ಹಣ ಜಮಾ ಮಾಡಲು ಗ್ರಾಹಕರ ಹಿಂದೇಟು: ಜನರನ್ನು ಆಕರ್ಷಿಸುತ್ತಿವೆ ಸಣ್ಣ ಬ್ಯಾಂಕ್​ಗಳು!

ವಿಚ್ಛೇದನ ವಿಚಾರದ ಬಗ್ಗೆ ಸ್ಯಾಮ್ ಹಾಗೂ ಚೈ ಸಾಕಷ್ಟು ಮೌನ ವಹಿಸಿದ್ದಾರೆ. ಪರೋಕ್ಷವಾಗಿ ಆಗೊಮ್ಮೆ ಈಗೊಮ್ಮೆ ಮಾತನಾಡಿದರೂ ಕೂಡ ಒಬ್ಬರ ಬಗ್ಗೆ ಮತ್ತೊಬ್ಬರು ಆರೋಪ- ಪ್ರತ್ಯಾರೋಪ ಮೊದಲಾದವುಗಳನ್ನು ನಡೆಸದೇ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ.

ಕೆಲ ಸಮಯದ ಹಿಂದೆ ನಾಗ ಚೈತನ್ಯರೊಂದಿಗಿದ್ದ ಸಮಂತಾ ಫೋಟೋಗಳನ್ನು ಇನ್​​ಸ್ಟಾಗ್ರಾಮ್​ನಲ್ಲಿ ಡಿಲೀಟ್ ಮಾಡಿದ್ದರು. ಇದೀಗ ನಟಿ ನಾಗ ಚೈತನ್ಯರನ್ನು ಅನ್​ಫಾಲೋ ಮಾಡಿದ್ದಾರೆ. ಆದರೆ ನಾಗ ಚೈತನ್ಯ ಮಾತ್ರ ಇನ್​ಸ್ಟಾಗ್ರಾಂನಲ್ಲಿ ಸಮಂತಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಈ ವಿಷಯವನ್ನು ಫ್ಯಾನ್ಸ್​ ಗಮನಿಸಿದ್ದಾರೆ. ಸದ್ಯ ಈ ವಿಚಾರ ಅಭಿಮಾನಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

‘ಶಾಕುಂತಲಂ’, ‘ಕಾಥುವಾಕುಲ ರೆಂಡು ಕಾದಲ್’, ‘ಅರೇಂಜ್​ಮೆಂಟ್ಸ್ ಆಫ್ ಲವ್’ ಮೊದಲಾದ ಚಿತ್ರಗಳಲ್ಲಿ ಸಮಂತಾ ಬಣ್ಣಹಚ್ಚುತ್ತಿದ್ದಾರೆ. ಇತ್ತೀಚೆಗೆ ‘ಪುಷ್ಪ: ದಿ ರೈಸ್’ ಚಿತ್ರದ ‘ಊ ಅಂಟಾವಾ’ ಹಾಡಿನಲ್ಲಿ ಹೆಜ್ಜೆಹಾಕಿದ್ದ ಸಮಂತಾ, ಸೆನ್ಸೇಶನ್ ಸೃಷ್ಟಿಸಿದ್ದರು. ಇದಕ್ಕಾಗಿ ಬರೋಬ್ಬರಿ 5 ಕೋಟಿ ರೂ ಸಂಭಾವನೆಯನ್ನು ನಟಿ ಪಡೆದಿದ್ದಾರೆ ಎಂದೂ ಸುದ್ದಿಯಾಗಿತ್ತು.

ಓದಿ:ನಡುರಸ್ತೆಯಲ್ಲೇ ಬಿಜೆಪಿ ಮುಖಂಡರೊಬ್ಬರ ಪುತ್ರನ ಬರ್ಬರ ಹತ್ಯೆ: ವಿಡಿಯೋ ವೈರಲ್​

ನಾಗ ಚೈತನ್ಯ ಬಾಲಿವುಡ್ ಪ್ರವೇಶಕ್ಕೆ ಸಿದ್ಧರಾಗುತ್ತಿದ್ದಾರೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ಪ್ರಮುಖ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ಕರೀನಾ ಕಪೂರ್ ನಾಯಕಿಯಾಗಿದ್ದು, ಈ ಚಿತ್ರವನ್ನು ಕಿರಣ್ ರಾವ್ ಹಾಗೂ ಆಮಿರ್ ಖಾನ್ ಜತೆಯಾಗಿ ನಿರ್ಮಿಸುತ್ತಿದ್ದಾರೆ.


ABOUT THE AUTHOR

...view details