ಸಂದರ್ಶನವೊಂದರಲ್ಲಿ ಮಾತನಾಡಿದ ಬಾಲಿವುಡ್ ನಟ ಸಲ್ಮಾನ್ ಖಾನ್, ಬಹಳ ದಿನಗಳ ಕಾಲ ಸ್ಟಾರ್ ಡಮ್ ಕಾಪಾಡಿಕೊಂಡು ಬರುವುದು ಕಷ್ಟ. ಆದರೂ ಈ ಸ್ಟಾರ್ ಡಮ್ಅನ್ನು ಕೆಲವು ಬಾಲಿವುಡ್ ನಟರು ಉಳಿಸಿಕೊಂಡು ಬಂದಿದ್ದಾರೆ ಎಂದು ಸ್ಟಾರ್ಗಳ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ.
ನಾನು ಸ್ಟಾರ್ ಡಮ್ ಉಳಿಸಿಕೊಂಡು ಬಂದವನು... ತಮ್ಮನ್ನೂ ಸೇರಿಸಿ ಕೆಲವರ ಹೆಸರು ಹೇಳಿದ ಸಲ್ಲು - news kannada
ಚಿತ್ರರಂಗದಲ್ಲಿ ಇಷ್ಟು ದಿನಗಳ ಕಾಲ ಸ್ಟಾರ್ ಡಮ್ ಉಳಿಸಿಕೊಂಡು ಬಂದವರು ಕೆಲವೇ ಕೆಲವರು ಮಾತ್ರ ಎಂದು ನಟ ಸಲ್ಮಾನ್ ಖಾನ್, ಸ್ಟಾರ್ ಡಮ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಜೊತೆಗೆ ಈವರಗೆ ತಮ್ಮ ಸ್ಟಾರ್ ಡಮ್ ಉಳಿಸಿಕೊಂಡು ಬಂದ ಕೆಲ ನಟರ ಹೆಸನ್ನು ಸಹ ಬಹಿರಂಗ ಮಾಡಿದ್ದಾರೆ.
ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವ್‌ಗನ್ ತಮ್ಮ ಸ್ಟಾರ್ ಡಮ್ಇನ್ನೂ ಉಳಿಸಿಕೊಂಡು ಬಂದಿದ್ದಾರೆ. ಅಲ್ಲದೇ ಈ ಪಟ್ಟಿಯಲ್ಲಿ ತಮ್ಮ ಹೆಸರು ಸಹ ಸೇರಿಕೊಂಡಿದೆ ಎಂದಿದ್ದಾರೆ ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್.
ಸ್ಟಾರ್ ಡಮ್ ಆರಂಭದಲ್ಲಿ ಚೆನ್ನಾಗಿ ಇರುತ್ತದೆ. ಆದ್ರೆ ಕ್ರಮೇಣ ಕೆಟ್ಟದಾಗುತ್ತದೆ. ಈವರೆಗೆ ಅದನ್ನು ಮುಂದುವರಿಸಿಕೊಂಡು ಬಂದಿರುವುದೇ ಒಂದು ದೊಡ್ಡ ಸವಾಲು. ಇನ್ನೂ ಕೆಲವು ದಿನಗಳವರೆಗೆ ಅದನ್ನು ಮುಂದುವರಿಸಲು ನಾವು ನಮ್ಮ ಪ್ರಯತ್ನ ಮಾಡುತ್ತೇವೆ. ಎಲ್ಲಾ ಸೂಪರ್ ಸ್ಟಾರ್ಗಳ ಚಿತ್ರಗಳ ಗಲ್ಲಾಪೆಟ್ಟಿಗೆ ಶೇ. 8ರಿಂದ 10ಕ್ಕೆ ಇಳಿಯುತ್ತದೆ. ಆದರೆ, ನಮ್ಮಲ್ಲಿ ಅದು ಇನ್ನೂ ಪ್ರಾರಂಭವಾಗಿಲ್ಲ ಎಂದಿದ್ದಾರೆ.