ಕರ್ನಾಟಕ

karnataka

ETV Bharat / sitara

ಗೂಢಚಾರಿ ಆಗಲಿದ್ದಾರೆ ಸಲ್ಮಾನ್ ಖಾನ್​​ - ಗೂಢಚಾರಿ ರವೀಂದ್ರ ಕೌಶಿಕ್

ಬ್ಲಾಕ್ ಟೈಗರ್ ಎಂದೇ ಜನಪ್ರಿಯರಾಗಿರುವ ಭಾರತೀಯ ಗೂಢಚಾರಿ ರವೀಂದ್ರ ಕೌಶಿಕ್ ಅವರ ಜೀವನವನ್ನಾಧರಿಸಿದ ಚಿತ್ರದಲ್ಲಿ ಸಲ್ಮಾನ್ ಖಾನ್​​​ ಗೂಢಚಾರಿಯಾಗಿ ಬಣ್ಣ ಹಚ್ಚಲಿದ್ದಾರಂತೆ. ಸಲ್ಮಾನ್ ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ಇದ್ದರೂ ಇದುವರೆಗೂ ಯಾವೊಂದು ಬಯೋಪಿಕ್​​​​​​​​​ನಲ್ಲೂ ನಟಿಸಿರಲಿಲ್ಲ. ಬ್ಲಾಕ್ ಟೈಗರ್ ಅವರ ಮೊದಲ ಬಯೋಪಿಕ್ ಸಿನಿಮಾ ಆಗಲಿದೆ.

Salman Khan
ಸಲ್ಮಾನ್ ಖಾನ್​​​

By

Published : Jun 18, 2021, 9:48 AM IST

ಸಲ್ಮಾನ್ ಖಾನ್​​​ಗೆ ಗೂಢಚಾರಿಯ ಪಾತ್ರ ಹೊಸದೇನಲ್ಲ. ಟೈಗರ್ ಮತ್ತು ಟೈಗರ್ ಜಿಂದಾ ಹೈ ಚಿತ್ರಗಳಲ್ಲಿ ಈಗಾಗಲೇ ಗೂಢಚಾರಿಯಾಗಿ ನಟಿಸಿದ್ದಾರೆ.

ಸದ್ಯ ಈ ಫ್ರಾಂಚೈಸಿಯ ಮೂರನೇ ಭಾಗವಾದ ಟೈಗರ್-3 ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಮಧ್ಯೆ ಸಲ್ಮಾನ್ ಇನ್ನೊಂದು ಹೊಸ ಸ್ಪೈ ಥ್ರಿಲ್ಲರ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಬಹುಶಃ ಈ ಚಿತ್ರಕ್ಕೆ ಬ್ಲಾಕ್ ಟೈಗರ್ ಎಂಬ ಹೆಸರಿಡುವ ಸಾಧ್ಯತೆ ಇದೆ.

ಟೈಗರ್ ಚಿತ್ರಗಳ ತರಹ ಈ ಚಿತ್ರವು ಕಾಲ್ಪನಿಕ ಕಥೆಗಳನ್ನು ಆಧರಿಸಿದ ಚಿತ್ರವಲ್ಲ. ಬದಲಿಗೆ ಬ್ಲಾಕ್ ಟೈಗರ್ ಎಂದೇ ಜನಪ್ರಿಯರಾಗಿರುವ ಭಾರತೀಯ ಗೂಢಚಾರಿ ರವೀಂದ್ರ ಕೌಶಿಕ್ ಅವರ ಜೀವನವನ್ನಾಧರಿಸಿದ ಚಿತ್ರವಾಗಿದೆ. ಸಲ್ಮಾನ್ ಖಾನ್ ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ಇದ್ದರೂ ಇದುವರೆಗೂ ಯಾವೊಂದು ಬಯೋಪಿಕ್​​​​​​​​​ನಲ್ಲೂ ನಟಿಸಿರಲಿಲ್ಲ. ಬ್ಲಾಕ್ ಟೈಗರ್ ಅವರ ಮೊದಲ ಬಯೋಪಿಕ್ ಸಿನಿಮಾ ಆಗಲಿದೆ.

ಸಲ್ಮಾನ್ ಏಕ್ ಥಾ ಟೈಗರ್ ಚಿತ್ರದಲ್ಲಿ ನಟಿಸಿದಾಗಲೇ ಇದು ರವೀಂದ್ರ ಕೌಶಿಕ್ ಅವರ ಜೀವನವನ್ನಾಧರಿಸಿದ ಚಿತ್ರ ಎಂಬ ಸುದ್ದಿ ಇತ್ತು. ಆದರೆ ಅದು ಸುಳ್ಳಾಯಿತು. ಈಗ ರವೀಂದ್ರ ಕೌಶಿಕ್ ಅವರ ಬಗ್ಗೆ ಸಾಕಷ್ಟು ರೀಸರ್ಚ್ ಮಾಡಿ, ರಾಜ್ ಕುಮಾರ್ ಗುಪ್ತಾ ಕಥೆ-ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಈಗಾಗಲೇ ಅವರು ಸಲ್ಮಾನ್​ಗೂ ನರೇಷನ್ ಕೊಟ್ಟಿದ್ದು, ಅವರು ಸಹ ಥ್ರಿಲ್ ಆಗಿದ್ದಾರಂತೆ.

ಇದೊಂದು ಪೀರಿಯಡ್ ಚಿತ್ರವಾಗಿದ್ದು, 70 ಮತ್ತು 80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥೆಯಂತೆ. ಹಾಗಾಗಿ ಅದಕ್ಕೆ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಂಡು ಚಿತ್ರತಂಡ ಚಿತ್ರೀಕರಣಕ್ಕೆ ಧುಮುಕಲಿದೆ ಎಂದು ಹೇಳಲಾಗಿದೆ. ಈಗಾಗಲೇ ಸಲ್ಮಾನ್ ಕೈಯಲ್ಲಿ ಭಾಯ್​ಜಾನ್, ಕಿಕ್-2 ಮುಂತಾದ ಚಿತ್ರಗಳಿದ್ದು, ಈ ಮಧ್ಯೆ ತಮಿಳಿನ ಮಾಸ್ಟರ್ ಹಾಗೂ ತೆಲುಗಿನ ಕಿಲಾಡಿ ಚಿತ್ರಗಳ ರೀಮೇಕ್​ನಲ್ಲಿ ಅವರು ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಇದೆ. ಇದೆಲ್ಲದರಿಂದ ಬಿಡುವು ಮಾಡಿಕೊಂಡು ಬ್ಲಾಕ್ ಟೈಗರ್ ಚಿತ್ರವನ್ನು ಸಲ್ಮಾನ್ ಯಾವಾಗ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ವ್ಯಕ್ತಪಡಿಸಿದ ನಟಿ ಆಶಿಕಾ ರಂಗನಾಥ್

ABOUT THE AUTHOR

...view details