ಬಾಲಿವುಡ್ ನಟಿ ಆಲಿಯಾ ಭಟ್ ಇಂದು 28ನೇ ವಸಂತಕ್ಕೆ ಕಾಲಿಡುತ್ತಿದ್ದು ಹುಟ್ಟುಹಬ್ಬದ ವಿಶೇಷವಾಗಿ 'ಆರ್ಆರ್ಆರ್' ಚಿತ್ರತಂಡ ಆಲಿಯಾ ಭಟ್ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದೆ. ಚಿತ್ರದಲ್ಲಿ ಆಲಿಯಾ ಭಟ್ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆಲಿಯಾ ಭಟ್ @ 28...ಸೀತಾ ಫಸ್ಟ್ಲುಕ್ ಬಿಡುಗಡೆ ಮಾಡಿದ ಚಿತ್ರತಂಡ - RRR movie
ಆಲಿಯಾ ಭಟ್ 28ನೇ ಹುಟ್ಟುಹಬ್ಬದ ಅಂಗವಾಗಿ 'ಆರ್ಆರ್ಆರ್' ಚಿತ್ರತಂಡ ಇಂದು ಸೀತಾ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಆಲಿಯಾ ಭಟ್ ಈ ಫೋಸ್ಟರನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಅಕ್ಟೋಬರ್ 13 ರಂದು ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ:ಬಾಲಿವುಡ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಬಂದ 'ಆಶಿಕ್ ಬನಾಯಾ ಅಪ್ನೇ' ಹುಡುಗಿ
ಆಲಿಯಾ ಭಟ್ ಫಸ್ಟ್ ಲುಕ್ ಹಂಚಿಕೊಂಡಿರುವ ಚಿತ್ರತಂಡ "ಕಾಯುವಿಕೆ ಮುಗಿದಿದೆ, ಆಲಿಯಾ ಭಟ್ ಅವರ ಸೀತಾ ಪಾತ್ರವನ್ನು ನಿಮಗೆ ಪರಿಚಯಿಸಲು ಬಹಳ ಸಂತೋಷವಾಗುತ್ತಿದೆ. ಹುಟ್ಟುಹಬ್ಬದ ಶುಭಾಶಯಗಳು ಆಲಿಯಾ ಭಟ್" ಎಂದು ಶುಭ ಕೋರಿದೆ. ತಮ್ಮ ಸೀತಾ ಪಾತ್ರದ ಪೋಸ್ಟರನ್ನು ಆಲಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಮ್ ಚರಣ್ ತೇಜ, ಜ್ಯೂನಿಯರ್ ಎನ್ಟಿಆರ್, ಅಜಯ್ ದೇವಗನ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಆಲಿಸನ್ ಡೂಡಿ, ರೇ ಸ್ಟೀವನ್ ಸನ್ನಂತ ಹಾಲಿವುಡ್ ನಟರು ಕೂಡಾ ನಟಿಸಿದ್ದಾರೆ. ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ್ ರಾಜು, ಕೊಮರಮ್ ಭೀಮ್ ಜೀವನ ಚರಿತ್ರೆ ಆಧಾರಿತ ಚಿತ್ರವನ್ನು ಡಿವಿವಿ ದಾನಯ್ಯ ನಿರ್ಮಿಸಿದ್ದು, ಎಸ್.ಎಸ್. ರಾಜಮೌಳಿ ನಿರ್ದೇಶಿಸಿದ್ದಾರೆ. ಅಕ್ಟೋಬರ್ 13 ರಂದು ಸಿನಿಮಾ ತೆರೆ ಕಾಣುತ್ತಿದೆ.