24 ಫೆಬ್ರವರಿ 2018 ರಂದು ಬೆಳಂಬೆಳಗ್ಗೆ ಸಿನಿಪ್ರಿಯರಿಗೆ ಬಂದ ಸುದ್ದಿ ಅವರಿಗೆ ಆಘಾತ ಉಂಟುಮಾಡಿತ್ತು. ಸುಮಾರು 5 ದಶಕಗಳ ಕಾಲ ಬಾಲಿವುಡ್ ಚಿತ್ರರಂಗವನ್ನು ಆಳಿದ್ದ ನಟಿ ಶ್ರೀದೇವಿ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ಇಂದು ಫೆಬ್ರವರಿ 24, ಅತಿಲೋಕ ಸುಂದರಿ ಶ್ರೀದೇವಿ ಇಂದು ನಮ್ಮನ್ನು ಅಗಲಿ 3 ವರ್ಷಗಳು.
ಇಂದು ಶ್ರೀದೇವಿ 3ನೇ ವರ್ಷದ ಪುಣ್ಯಸ್ಮರಣೆ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಶ್ರೀದೇವಿ 2018 ರಲ್ಲಿ ಶ್ರೀದೇವಿ ನಿಧರಾಗುವ ಒಂದು ವಾರದ ಮುನ್ನವೇ ಸೋದರ ಸಂಬಂಧಿ ಮದುವೆಗೆಂದು ಬೋನಿ ಕಪೂರ್ ಹಾಗೂ ಮಕ್ಕಳೊಂದಿಗೆ ದುಬೈಗೆ ತೆರಳಿದ್ದರು. ಮದುವೆ ಮುಗಿದ ನಂತರ ಬೋನಿ ಕಪೂರ್ ಹಾಗೂ ಮಕ್ಕಳು ಭಾರತಕ್ಕೆ ವಾಪಸಾದರೂ ಶ್ರೀದೇವಿ ಮಾತ್ರ ಕೆಲಸದ ನಿಮ್ಮಿತ್ತ ದುಬೈ ಹೋಟೆಲ್ ರೂಂವೊಂದರಲ್ಲಿ ಉಳಿದುಕೊಂಡಿದ್ದರು. ಆದರೆ ಫೆಬ್ರವರಿ 24 ರಂದು ಸ್ನಾನಕ್ಕೆಂದು ತೆರಳಿದ್ದ ಶ್ರೀದೇವಿಗೆ ಹೃದಯಾಘಾತವಾಗಿ ಬಾತ್ ಟಬ್ನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿದ ಬೋನಿ ಕಪೂರ್ ಹಾಗೂ ಮಕ್ಕಳು ಕೂಡಲೇ ದುಬೈಗೆ ತೆರಳಿದ್ದಾರೆ. ಮರುದಿನ ವಿಶೇಷ ವಿಮಾನದಲ್ಲಿ ಶ್ರೀದೇವಿ ಮೃತದೇಹವನ್ನು ಮುಂಬೈಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯ್ತು. ಇಂದು ಅಭಿಮಾನಿಗಳು ಹಾಗೂ ಕುಟುಂಬದವರು ಶ್ರೀದೇವಿ ಅವರನ್ನು ಸ್ಮರಿಸಿದ್ದಾರೆ.
ಅಮ್ಮನ ಮೇಣದ ಪ್ರತಿಮೆ ಮುಂದೆ ಜಾಹ್ನವಿ 'ಇಂಗ್ಲೀಷ್ ವಿಂಗ್ಲೀಷ್' ಚಿತ್ರದಲ್ಲಿ ಶ್ರೀದೇವಿ ಇದನ್ನೂ ಓದಿ:ರಾಜ್‌ಕುಮಾರ್ ಹಿರಾನಿ ಚಿತ್ರಕ್ಕೆ ಶಾರುಖ್ ಜೊತೆ ಒಂದಾದ ತಾಪ್ಸಿ ಪನ್ನು
ಶ್ರೀದೇವಿ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. ತಮಿಳು, ಹಿಂದಿ, ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಕೂಡಾ ಶ್ರೀದೇವಿ ನಟಿಸಿದ್ದಾರೆ. ಮೂಲತ: ತಮಿಳು ಕುಟುಂಬಕ್ಕೆ ಸೇರಿದ ಶ್ರೀದೇವಿ ದೊಡ್ಡ ಹೆಸರು ಮಾಡಿದ್ದು ಮಾತ್ರ ಬಾಲಿವುಡ್ನಲ್ಲಿ. ಆಕೆಯ ಸೌಂದರ್ಯ, ನಟನೆ, ಡ್ಯಾನ್ಸ್ಗೆ ಫಿದಾ ಆಗದವರಿಲ್ಲ. ಮದುವೆಯಾದ ನಂತರ ಕೆಲವು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಈ ಚೆಲುವೆ, ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಲಾರಂಭಿಸಿದ್ದರು. ಶ್ರೀದೇವಿಗೆ ಅನೇಕ ಪ್ರಶಸ್ತಿಗಳು ಒಲಿದು ಬಂದಿವೆ. ಕನ್ನಡದಲ್ಲಿ ಭಕ್ತ ಕುಂಬಾರ, ಹೆಣ್ಣು ಸಂಸಾರದ ಕಣ್ಣು, ಬಾಲ ಭಾರತ, ಯಶೋಧ ಕೃಷ್ಣ, ಪ್ರಿಯಾ ಸಿನಿಮಾಗಳಲ್ಲಿ ಶ್ರೀದೇವಿ ನಟಿಸಿದ್ದಾರೆ.
ಹಿಂದಿ ಚಿತ್ರವೊಂದರಲ್ಲಿ ಶ್ರೀದೇವಿ ಶ್ರೀದೇವಿ ಪತಿ ಬೋನಿ ಕಪೂರ್ ಬಾಲಿವುಡ್ನಲ್ಲಿ ದೊಡ್ಡ ನಿರ್ಮಾಪಕರಾಗಿ ಹೆಸರು ಮಾಡಿದ್ದಾರೆ. ಮೊದಲ ಪತ್ನಿ ಜಾಹ್ನವಿ ಕಪೂರ್ 'ಧಡಕ್' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಿದ್ದಾರೆ. ಅಂಗ್ರೇಜಿ ಮೀಡಿಯಂ, ಗುಂಜಾನ್ ಸಕ್ಸೇನಾ ಸಿನಿಮಾಗಳಲ್ಲಿ ಜಾಹ್ನವಿ ನಟಿಸಿದ್ದಾರೆ. ಜಾಹ್ನವಿ ಅಭಿನಯದ ರೂಹಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸದ್ಯಕ್ಕೆ ಅವರು ದೋಸ್ತಾನಾ 2 ಹಾಗೂ ಗುಡ್ ಲಕ್ ಜೆರ್ರಿ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಶ್ರೀದೇವಿ ಎರಡನೇ ಪುತ್ರಿ ಖುಷಿ ಕೂಡಾ ಶ್ರೀಘ್ರದಲ್ಲೇ ಬಾಲಿವುಡ್ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.