ಮುಂಬೈ:ಬಾಲಿವುಡ್ನಲ್ಲಿ ಹಬ್ಬುತ್ತಿರುವ ಲಾಬಿಗಳು ಮತ್ತು ಕೆಟ್ಟ ರಾಜಕೀಯದ ಬಗ್ಗೆ ನಟಿ ರವೀನಾ ಟಂಡನ್ ಅವರು ಕೋಪಗೊಂಡು ಟ್ವೀಟ್ ಮಾಡಿದ್ದಾರೆ.
ಗರ್ಲ್ಫ್ರೆಂಡ್ಸ್ ಕಾರಣದಿಂದ ಸಿನಿಮಾಗಳಲ್ಲಿ ಹೀರೋಗಳನ್ನು ತೆಗೆದು ಹಾಕಲಾಗುತ್ತಿದೆ ಎಂದು ಹೇಳುವ ಮೂಲಕ ನನ್ನ ಮೇಲೆ ಮಾಧ್ಯಮಗಳು ಜೋಕ್ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.
ಸಿನಿಮಾ ಉದ್ಯಮದಲ್ಲಿ ಮಹಿಳೆಯರನ್ನಿಟ್ಟುಕೊಂಡು ತಮಾಷೆ ಮಾಡಲಾಗುತ್ತಿದೆ. ಅಲ್ಲದೇ ಮಾಧ್ಯಮಗಳಲ್ಲಿ ಬರುವ ಸುಳ್ಳು ಸುದ್ದಿಯಿಂದ ಅವರ ವೃತ್ತಿ ಜೀವನ ಕೂಡ ಕೊನೆಗೊಳ್ಳುತ್ತಿದೆ. ಕೆಲವರು ಈ ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಿ ಜಯಗಳಿಸುತ್ತಾರೆ, ಆದ್ರೆ ಕೆಲವರಿಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ.ಇರುವ ಸತ್ಯವನ್ನು ಧೈರ್ಯವಾಗಿ ಹೇಳಿದ್ರೆ, ಅವರನ್ನು ಹುಚ್ಚರು, ಸುಳ್ಳು ಹೇಳುತ್ತಿದ್ದಾರೆ ಮತ್ತು ಮಾನಸಿಕ ದುರ್ಬಲರು ಎಂದು ಹೇಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಪತ್ರಕರ್ತರು ಪುಟಗಟ್ಟಲೇ ನಮ್ಮ ತಪ್ಪುಗಳನ್ನು ಪತ್ರಿಕೆಯಲ್ಲಿ ಬರೆದು ನಮ್ಮ ಹೆಸರು, ಶ್ರಮ ಎಲ್ಲವನ್ನು ನಾಶಮಾಡುತ್ತಿದ್ದಾರೆ. ನಾನು ಸಿನಿಮಾ ಉದ್ಯಮದಿಂದಲೇ ಬೆಳೆದಿದ್ದು, ನನಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಆದ್ರೆ ಕೆಲವರ ಕೊಳಕು ರಾಜಕೀಯದಿಂದ ನನಗೆ ಕೆಲವು ಕೆಟ್ಟ ಅನುಭವಗಳು ಆಗಿವೆ ಎಂದರು.