ಹೈದರಾಬಾದ್ (ತೆಲಂಗಾಣ): ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಅವರು ತಮ್ಮ ಮುಂದಿನ ಬಾಲಿವುಡ್ ಬಿಗ್ ಸಿನಿಮಾ 'ಅನಿಮಲ್' ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ.
ಸಂದೀಪ್ ಅವರ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಪರಿಣಿತಿ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ವಿಶೇಷ ಸಾಂಗ್‍ವೊಂದು ಬರಲಿದ್ದು, ಇದಕ್ಕೆ ದಕ್ಷಿಣದ ಬ್ಯೂಟಿ ರಶ್ಮಿಕಾ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್ ಚಿತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿರುವ ರಶ್ಮಿಕಾ, ಅನಿಮಲ್ ಚಿತ್ರದಲ್ಲಿ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಛಾಪು ಮೂಡಿಸಿದ್ದ ಪುಷ್ಪ: ಶೀಘ್ರದಲ್ಲೇ ಪುಷ್ಪ 2 ಚಿತ್ರೀಕರಣ ಪ್ರಾರಂಭ
ಈ ಚಿತ್ರದ ವಿಶೇಷ ಹಾಡಿಗೆ ಗೀತ ಗೋವಿಂದಂ ನಟ ಒಪ್ಪಿಗೆ ನೀಡಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ರಶ್ಮಿಕಾ ಮಂದಣ್ಣ ಕೊನೆಯ ಬಾರಿಗೆ ಶರ್ವಾನಂದ್ ಜೊತೆ ಆದಾವಲು ಮೀಕು ಜೋರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ವಿಶೇಷ ಸಾಂಗ್‍ವೊಂದಕ್ಕೆ ರಶ್ಮಿಕಾ ಸ್ಟೆಪ್ ಹಾಕಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ.