ಕರ್ನಾಟಕ

karnataka

ETV Bharat / sitara

ರಣವೀರ್ ಸಿಂಗ್ ನಟನೆಯ 'ಜಯೇಶ್‌ಭಾಯ್ ಜೋರ್ದಾರ್' ರಿಲೀಸ್​ ಡೇಟ್​ ಫಿಕ್ಸ್​

ದಿವ್ಯಾಂಗ್ ಠಕ್ಕರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ವೀರ್ ಸಿಂಗ್ ನಟನೆಯ 'ಜಯೇಶ್‌ಭಾಯ್ ಜೋರ್ದಾರ್' ಚಿತ್ರ ಮೇ 13 ರಂದು ಬಿಡುಗಡೆಯಾಗಲಿದೆ.

By

Published : Mar 3, 2022, 7:52 PM IST

ಜಯೇಶ್‌ಭಾಯ್ ಜೋರ್ದಾರ್
ಜಯೇಶ್‌ಭಾಯ್ ಜೋರ್ದಾರ್

ಬಾಲಿವುಡ್ ಲೈವ್‌ವೈರ್ ಸ್ಟಾರ್ ರಣವೀರ್ ಸಿಂಗ್ ಅವರ ಮುಂದಿನ ಚಿತ್ರ 'ಜಯೇಶ್‌ಭಾಯ್ ಜೋರ್ದಾರ್' ಮೇ 13 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಮೊದಲು ಚಿತ್ರವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ ಮುಂದೂಡಲಾಗಿತ್ತು. ಇದೀಗ ರಿಲೀಸ್​ ಡೇಟ್​ ಫಿಕ್ಸ್ ಆಗಿದೆ.

ಜಯೇಶ್‌ಭಾಯ್ ಪಾತ್ರದ ಬಗ್ಗೆ ವಿವರಣೆ ನೀಡಿರುವ ರಣವೀರ್​ ಸಿಂಗ್​​​, "ಜಯೇಶ್ ನೀವಂದುಕೊಂಡಂತೆ ಟಿಪಿಕಲ್​​ ಜೀವನದ ಹೀರೋ ಅಲ್ಲ, ಆದರೆ ಕಥೆಯ ಹಾದಿಯಲ್ಲಿ ಅವನು ಮಾಡಿದ್ದು ವೀರೋಚಿತವಾಗಿದೆ. ನಾನು ಆ ಪಾತ್ರಕ್ಕೆ ಆಕರ್ಷಿತನಾಗಿದ್ದೆ. ಈ ಚಿತ್ರದ ಭಾಗವಾಗಲು ನಾನು ಸ್ಥಳದಲ್ಲೇ ಒಪ್ಪಿಕೊಂಡೆ. ಜಯೇಶ್ ನಾನು ಹಿಂದೆಂದೂ ಪ್ರಯತ್ನಿಸದ ಪಾತ್ರವಾಗಿದೆ. ಅವನು ನಾಯಕನಾಗಿ ವಿಕಸನಗೊಳ್ಳುತ್ತಾನೆ ಮತ್ತು ಅವನ ಪಯಣ ಗಮನಾರ್ಹ ಮತ್ತು ನಿಜವಾಗಿಯೂ ಸೂಪರ್. ಅವನು ಅಸಾಂಪ್ರದಾಯಿಕ ಪ್ರಕಾರದ ಸೂಪರ್ ಹೀರೋ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್-1.. ಐಶ್ವರ್ಯಾ ರೈ ಬಚ್ಚನ್​, ತ್ರಿಶಾ ಫಸ್ಟ್ ಲುಕ್ ರಿವೀಲ್

ದಿವ್ಯಾಂಗ್ ಠಕ್ಕರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜಯೇಶ್‌ಭಾಯ್ ಜೋರ್ದಾರ್' ಚಿತ್ರವನ್ನು ಯಶ್​ ರಾಜ್​ ಫಿಲ್ಮ್ (YRF) ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ YRF, "ಎಲ್ಲಾ ಹೀರೋ ಒಂದು ತರಹ ಆದ್ರೆ, ಜಯೇಶ್‌ಭಾಯ್ ಜೋರ್ದಾರ್ ಒಂದು ತರಹ" ಎಂದು ಬರೆದುಕೊಂಡಿದೆ.

ABOUT THE AUTHOR

...view details