ಕರ್ನಾಟಕ

karnataka

ETV Bharat / sitara

ಶಿಕ್ಷಕರ ದಿನಾಚರಣೆಗೆ 'ಟೀಚರ್ಸ್​ ವಿಸ್ಕಿ' ಪೋಸ್ಟ್​... ಏನಿದು ಕರ್ಮ ಅಂದ್ರು ವರ್ಮಾ ಫ್ಯಾನ್ಸ್​ - ಶಿಕ್ಷಕರ ದಿನಾಚರಣೆ

ವಿಸ್ಕಿ ಬ್ರಾಂಡ್ ಒಂದರ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ 'ಶಿಕ್ಷಕರ ದಿನಾಚರಣೆಯನ್ನು ಎಲ್ಲಾ ಟೀಚರ್​​​ಗಳು ಟೀಚರ್ ವಿಸ್ಕಿ ಕುಡಿದು ಆಚರಿಸುತ್ತಾರಾ...? ಸುಮ್ಮನೆ ಕೇಳುತ್ತಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.

ರಾಮ್​​​ಗೋಪಾಲ್​​ ವರ್ಮಾ

By

Published : Sep 5, 2019, 3:29 PM IST

ನಾನು ಯಾವಾಗಲೂ ಭಿನ್ನ ಎಂದು ತೋರಿಸಿಕೊಳ್ಳಲು ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.

ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣ ಹಾಗೂ ಗೋಪಿಕೆ ಇರುವ ಪೋಟೋವೊಂದಕ್ಕೆ ತನ್ನ ಹಾಗೂ ಶ್ರೀದೇವಿ ಮುಖ ಎಡಿಟ್ ಮಾಡಿ ಸ್ಪೂಫ್ ವಿಡಿಯೋ ಮಾಡಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದರು. ಇದೀಗ ಇಂದು ಶಿಕ್ಷಕರ ದಿನಾಚರಣೆ ಸಂಬಂಧ ವರ್ಮಾ ಮತ್ತೊಂದು ಪೋಸ್ಟ್ ಮಾಡಿದ್ದಾರೆ. 'TEACHER'S 50' ಎಂಬ ವಿಸ್ಕಿ ಬ್ರಾಂಡ್ ಪೋಟೋವೊಂದನ್ನು ಶೇರ್ ಮಾಡಿ 'ಟೀಚರ್​​ಗಳ ದಿನಾಚರಣೆಯನ್ನು ಎಲ್ಲಾ ಟೀಚರ್​​​ಗಳು 'ಟೀಚರ್ ವಿಸ್ಕಿ' ಕುಡಿದು ಆಚರಿಸುತ್ತಾರಾ...? ಸುಮ್ಮನೆ ಕೇಳುತ್ತಿದ್ದೇನೆ' ಎಂದು ಪೋಸ್ಟ್ ಮಾಡಿದ್ದಾರೆ.

ಅಲ್ಲದೆ ಮತ್ತೊಂದು ಪೋಸ್ಟ್​​​​ನಲ್ಲಿ 'ನಾನು ಒಬ್ಬ ಕೆಟ್ಟ ವಿದ್ಯಾರ್ಥಿಯಾಗಿದ್ದರೆ, ನನ್ನನ್ನು ತಿದ್ದಿ ತೀಡಿ ಒಳ್ಳೆಯ ವಿದ್ಯಾರ್ಥಿಗಳನ್ನಾಗಿ ಮಾಡುವುದು ಗುರುಗಳ ಕರ್ತವ್ಯ. ಆದರೆ ಎಲ್ಲಾ ಟೀಚರ್​​ಗಳು ನನ್ನನ್ನು ತಿದ್ದುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಅವರೆಲ್ಲಾ ಕೆಟ್ಟ ಟೀಚರ್​​​ಗಳು' ಎಂದು ಬರೆದುಕೊಂಡಿದ್ದಾರೆ. ವರ್ಮಾ ಅವರ ಈ ಪೋಸ್ಟ್​​ ನೋಡಿ ಕೆಲವರು ನಕ್ಕು ಸುಮ್ಮನಾಗಿದ್ದಾರೆ. ಮತ್ತೆ ಕೆಲವರು ಕೋಪ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details