ಕರ್ನಾಟಕ

karnataka

ETV Bharat / sitara

ರಾಜ್​ಕುಮಾರ್ ರಾವ್ ನಟನೆಯ 'ಛಲಾಂಗ್' ನವೆಂಬರ್ 13 ರಂದು ರಿಲೀಸ್ - Rajkumar rao starring Chhalaang

ಹನ್ಸಲ್ ಮೆಹ್ತಾ ನಿರ್ದೇಶನದ ಛಲಾಂಗ್ ಚಿತ್ರ ನವೆಂಬರ್ 13 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಾಜ್​ಕುಮಾರ್ ರಾವ್ ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Chhalaang release on November 13
ಛಲಾಂಗ್

By

Published : Nov 3, 2020, 1:12 PM IST

ರಾಜ್​ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಛಲಾಂಗ್' ಸಿನಿಮಾ ನವೆಂಬರ್ 13 ರಂದು ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಬಗ್ಗೆ ಕುರಿತಾದ ಈ ಸಿನಿಮಾವನ್ನು ನೋಡಲು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡಿರುವ ರಾಜ್​ಕುಮಾರ್ ರಾವ್, ನಮ್ಮ ಸಿನಿಮಾ ಖಂಡಿತ ವೀಕ್ಷಕರನ್ನು ಮುಟ್ಟಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಾಜ್​ಕುಮಾರ್ ರಾವ್ ದೈಹಿಕ ಶಿಕ್ಷಣ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾರೆ. ಜನರು ತಮ್ಮ ಜೀವನಕ್ಕೆ ಬಹಳ ಹತ್ತಿರವಾದ ವಿಚಾರಗಳನ್ನು ಹೊಂದಿರುವ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಅಂತಹ ಸಿನಿಮಾಗಳನ್ನು ನೋಡುವಾಗ ನಾವೂ ಕೂಡಾ ಈ ಚಿತ್ರದ ಒಂದು ಭಾಗ ಎಂಬ ಭಾವನೆ ವ್ಯಕ್ತಪಡಿಸುತ್ತಾರೆ. ಚಿತ್ರದ ಕಥೆಯನ್ನು ಹಾಸ್ಯಮಯವಾಗಿ ತೋರಿಸಲಾಗಿದ್ದು ನಿಜಕ್ಕೂ ನಮ್ಮ ಸಿನಿಮಾವನ್ನು ಜನರು ಇಷ್ಟಪಡುತ್ತಾರೆ.

ನಿರ್ದೇಶನ ಹನ್ಸಲ್ ಅವರೊಂದಿಗೆ ಕೆಲಸ ಮಾಡುವುದು ನಿಜಕ್ಕೂ ಸಂತೋಷದ ವಿಚಾರ. ಸೆಟ್​​ನಲ್ಲಿ ನಾವು ಬಹಳ ಎಂಜಾಯ್ ಮಾಡಿದ್ದೇವೆ. ನಮ್ಮಲ್ಲಿ ಉತ್ತಮ ಸಾಹಿತ್ಯವಿದೆ. ಇದನ್ನು ಉತ್ತಮ ರೀತಿಯಲ್ಲಿ ಜನರಿಗೆ ತಲುಪಿಸುವುದು ನಮ್ಮ ಕೆಲಸ ಎಂದು ರಾಜ್​​ಕುಮಾರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಜಯ್ ದೇವಗನ್, ಲವ್ ರಂಜನ್, ಅಂಕುರ್ ಗರ್ಗ್, ಭೂಷಣ್ ಕುಮಾರ್ ಸೇರಿ ನಿರ್ಮಿಸಿರುವ ಈ ಚಿತ್ರವನ್ನು ಹನ್ಸಲ್ ಮೆಹ್ತಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜ್​ಕುಮಾರ್​​​ಗೆ ನಾಯಕಿಯಾಗಿ ನುಸ್ರತ್ ಬರುಚ ನಟಿಸಿದ್ದಾರೆ. ಸೌರಭ್ ಶುಕ್ಲಾ, ಸತೀಶ್ ಕೌಶಿಕ್, ಇಳಾ ಅರುಣ್, ಜತಿನ್ ಶರ್ಮ ಹಾಗೂ ಇನ್ನಿತರರು ನಟಿಸಿದ್ದಾರೆ.

ABOUT THE AUTHOR

...view details