ಮುಂಬೈ (ಮಹಾರಾಷ್ಟ್ರ): ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಉದ್ಯಮಿ ರಾಜ್ ಕುಂದ್ರಾ ಮತ್ತು ರಿಯಾನ್ ಥೋರ್ಪ್ ಅವರಿಗೆ ಜುಲೈ 27 ರವರೆಗೆ ಪೊಲೀಸ್ ಕಸ್ಟಡಿ ವಿಸ್ತರಿಸಲಾಗಿದೆ.
ಕುಂದ್ರಾ ಮತ್ತು ರಿಯಾನ್ ಅವರನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಮತ್ತು 7 ದಿನಗಳ ಪೊಲೀಸ್ ಕಸ್ಟಡಿ ನೀಡುವಂತೆ ಕೋರಿದ್ದರು. ನೀಲಿ ಚಿತ್ರದ ಮೂಲಕ ಗಳಿಸಿದ ಹಣವನ್ನು ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಲಾಗಿದೆಯೆಂದು ಮುಂಬೈ ಪೊಲೀಸರು ಶಂಕಿಸಿದ್ದಾರೆ. ಆದ್ದರಿಂದ ರಾಜ್ ಕುಂದ್ರಾ ಅವರ ಯೆಸ್ ಬ್ಯಾಂಕ್ (YES Bank) ಖಾತೆ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಆಫ್ರಿಕಾ ಖಾತೆಯ ನಡುವಿನ ವಹಿವಾಟಿನ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಏತನ್ಮಧ್ಯೆ, ಕುಂದ್ರಾ ಮತ್ತು ಅವರ ಕಂಪನಿ ಕಳೆದ ಒಂದೂವರೆ ವರ್ಷಗಳಲ್ಲಿ 100 ಕ್ಕೂ ಹೆಚ್ಚು ನೀಲಿ ಚಿತ್ರಗಳನ್ನು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕುಂದ್ರಾ ಅವರಿಂದ ಹೆಚ್ಚಾಗಿ ವಯಸ್ಕ ವಿಷಯಕ್ಕೆ ಸಂಬಂಧಿಸಿರುವ 4 ಟಿಬಿ ಚಿತ್ರಗಳು ಮತ್ತು ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 35 ಹಾಟ್‌ಶಾಟ್‌ಗಳು ಸೇರಿದಂತೆ 51 ಕ್ಲಿಪ್‌ಗಳು ಕುಂದ್ರಾ ಲ್ಯಾಪ್‌ಟಾಪ್‌ನಲ್ಲಿ ಕಂಡುಬಂದಿವೆ. ಈ ಎಲ್ಲಾ ಕ್ಲಿಪ್‌ಗಳನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್ ಮಾಡಲಾಗಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ:ಅಶ್ಲೀಲ ಚಿತ್ರ ನಿರ್ಮಾಣ ಆರೋಪ: ನಟಿ Shilpa Shetty ಪತಿ ರಾಜ್ ಕುಂದ್ರಾ ಅರೆಸ್ಟ್