ಚೈನ್ನೈ: ಗೌರವ ಸಿಗಲಿಲ್ಲ ಅನ್ನೋ ಕಾರಣಕ್ಕೆ ಬಾಲಿವುಡ್ನಿಂದ ನಿರ್ಗಮಿಸಿರುವ ತಮಿಳು ನಿರ್ದೇಶಕ ರಾಘವ ಲಾರೆನ್ಸ್ ಅವರ ಮನವೊಲಿಕೆ ಕಾರ್ಯ ನಡೆದಿದೆ. ಸ್ವತಃ ನಿರ್ಮಾಪಕರೇ ವಿಮಾನ ಏರಿ ರಾಘವ ಮನೆಗೆ ಬರುತ್ತಿದ್ದಾರೆ.
ಗೌರವಕ್ಕೆ ಸಂದ ಬೆಲೆ... ರಾಘವ್ ಮನೆಗೆ ಬಾಲಿವುಡ್ ನಿರ್ಮಾಪಕ - ತಮಿಳು
ಗೌರವ ಇಲ್ಲದ ಜಾಗದಲ್ಲಿ ನಾನು ಇರಲ್ಲ. ಈ ಪ್ರಪಂಚದಲ್ಲಿ ಹಣ, ಹೆಸರಿಗಿಂತ ಆತ್ಮಾಭಿಮಾನ ಎಷ್ಟೋ ಮುಖ್ಯ. ನನಗೆ ಆತ್ಮಾಭಿಮಾನ ಇದೆ. ಅದಕ್ಕೆ ಲಕ್ಷ್ಮಿ ಬಾಂಬ್ ಚಿತ್ರದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದಿದ್ದರು ರಾಘವ್. ಇದೀಗ ಇವರ ಮನ ಒಲಿಸಲು ಲಕ್ಷ್ಮೀ ಬಾಂಬ್ ನಿರ್ಮಾಪಕ ಖುದ್ದು ತಾವೇ ಚೆನ್ನೈಗೆ ಆಗಮಿಸುತ್ತಿದ್ದಾರೆ.
ರಾಘವ ಲಾರೆನ್ಸ್ ನಟಿಸಿ, ನಿರ್ದೇಶಿಸಿರುವ ಕಾಂಚನಾ - 3 ಸಿನಿಮಾ ಬಾಲಿವುಡ್ನಲ್ಲಿ ಲಕ್ಷ್ಮೀ ಬಾಂಬ್ ಟೈಟಲ್ನಲ್ಲಿ ರಿಮೇಕ್ ಆಗುತ್ತಿದೆ. ಅಕ್ಷಯ್ ಕುಮಾರ್ ನಟಿಸುತ್ತಿರುವ ಈ ಚಿತ್ರಕ್ಕೂ ಇವರೇ ನಿರ್ದೇಶನ ಮಾಡಲಿದ್ದರು. ಆದರೆ, ಇವರ ಗಮನಕ್ಕೆ ತರದೆ ಚಿತ್ರತಂಡ ಫಸ್ಟ್ ಲುಕ್ ರಿಲೀಸ್ ಮಾಡಿತ್ತು. ಇದರಿಂದ ನೊಂದುಕೊಂಡಿದ್ದ ರಾಘವ್, ನಮಗೆ ಗೌರವ ಸಿಗದಿರುವ ಜಾಗದಲ್ಲಿ ನಿಲ್ಲಬಾರದು ಎಂದು ಚಿತ್ರತಂಡದಿಂದ ಹೊರ ನಡೆದಿದ್ದರು. ಈ ಸುದ್ದಿ ಕಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಬಹು ಚರ್ಚಿತವಾಗಿತ್ತು. ನಮ್ಮ ನಿರ್ದೇಶಕರನ್ನು ಅಲ್ಲಿಗೆ ಕರೆಯಿಸಿಕೊಂಡು ಅಪಮಾನ ಮಾಡಲಾಯಿತು ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಇತ್ತ ಲಕ್ಷ್ಮೀ ಬಾಂಬ್ ಚಿತ್ರಕ್ಕೆ ಹೊಸ ನಿರ್ದೇಶಕರನ್ನು ಕರೆತರುತ್ತಾರೆ ಎನ್ನಲಾಗಿತ್ತು. ಆದರೆ, ಚಿತ್ರತಂಡ ಬೇಗನೆ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಮತ್ತೇ ರಾಘವ್ ಅವರನ್ನೇ ಕರೆತಂದು, ನಿರ್ದೇಶನ ಮಾಡಿಸಲು ಮುಂದಾಗಿದೆ. ಈಗಾಗಲೇ ಅವರ ಜತೆ ಮಾತಾಡಿರುವ ನಿರ್ಮಾಪಕರು, ಸ್ವತಃ ಚೆನ್ನೈಗೆ ಬಂದು ಮಾತುಕತೆ ನಡೆಸಲಿದ್ದಾರಂತೆ. ರಾಘವ್ ಕೂಡ ತಮ್ಮ ಮನಸ್ಸು ಬದಲಿಸಿಕೊಳ್ಳುವ ಲಕ್ಷಣ ಗೋಚರಿಸಿದೆ. ಅಕ್ಷಯ್ ಕುಮಾರ್ ಹಾಗೂ ತಮ್ಮ ಅಭಿಮಾನಿಗಳ ಪ್ರೀತಿಭರಿತ ಒತ್ತಡಕ್ಕೆ ಮಣಿದಿರುವ ಅವರು, ನಿರ್ಮಾಪಕರು ಚೆನ್ನೈಗೆ ಬರುತ್ತಿದ್ದಾರೆ. ಒಂದು ವೇಳೆ ನಮಗೆ ಅಲ್ಲಿ ಗೌರವ ಸಿಗುವುದಾದರೆ, ನಾನು ವರ್ಕ್ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಭೇಟಿಯ ನಂತರ ಏನಾಗುತ್ತೆ ಎಂಬುದನ್ನು ನೋಡೋಣ ಎಂದು ಅಭಿಮಾನಿಗಳಿಗೆ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.