ಪ್ರಸ್ತುತ ಲಂಡನ್ನಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ತಮ್ಮ ಅಮೆರಿಕನ್ ಪತಿ ನಿಕ್ ಜೊನಾಸ್ ಮತ್ತು ಅತ್ತೆ-ಮಾವನ ಜತೆ ಹೋಳಿ ಆಚರಣೆ ಮಾಡಿದ್ದಾರೆ.
ಇಂದು ಬೆಳಗ್ಗೆ, ಹೋಳಿ ಆಚರಣೆಯ ವರ್ಣರಂಜಿತ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
"ಹೋಳಿ ಬಣ್ಣಗಳ ಹಬ್ಬ. ಇದು ನನ್ನ ಮೆಚ್ಚಿನ ಹಬ್ಬಗಳಲ್ಲಿ ಒಂದಾಗಿದೆ" ಎಂದು ಪಿಗ್ಗಿ ಬರೆದಿದ್ದಾರೆ. "ನಾವೆಲ್ಲರೂ ಹೋಳಿ ಹಬ್ಬವನ್ನು ನಮ್ಮ ಪ್ರೀತಿಪಾತ್ರರೊಡನೆ ಆಚರಿಸೋಣ. ಎಲ್ಲರಿಗೂ ಹ್ಯಾಪಿ ಹೋಳಿ" ಎಂದು ಶುಭ ಕೋರಿದ್ದಾರೆ.