ಹೈದರಾಬಾದ್: ಸಿನಿಮಾ ಅಲ್ಲದೇ ತಮ್ಮ ಅಭಿಪ್ರಾಯ ಹೇಳುವ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ಹೊಸ ವಿಷಯ ಚರ್ಚೆಗೆ ಎಳೆದು ತಂದಿದ್ದಾರೆ. ಇಂಡಿಯಾ ಎಂಬ ಹೆಸರನ್ನು ಬದಲಿಸಿ ಭಾರತ ಎಂದು ದೇಶವನ್ನು ಕರೆಯಬೇಕು ಎಂದು ಆಗ್ರಹಿಸಿರುವ ಕಂಗನಾಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ದೇಶದ ಹೆಸರನ್ನು ಬದಲಿಸಿದ್ದರಿಂದ ಅಥವಾ ಬದಲಿಸುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ದೇಶದ ಜನತೆಯ ಆಲೋಚನೆ ಹಾಗೂ ನಡತೆ ಬದಲಾಗಬೇಕು. ಅಂದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂದಿದ್ದಾರೆ.