ನವದೆಹಲಿ:ಬಾಲಿವುಡ್ ನಟಿ ನೇಹಾ ಧೂಪಿಯಾ - ಅಂಗದ್ ಬೇಡಿ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾನು ಗರ್ಭಿಣಿಯಾಗಿರುವ ವಿಷಯವನ್ನು ನೇಹಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬ ಸಮೇತರಾಗಿರುವ ಫೋಟೋದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ನೇಹಾ.
ಇನ್ನು ತಮ್ಮ ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ತಾನು ಅನುಭವಿಸಿದ ಕಷ್ಟಗಳ ಬಗ್ಗೆ ನೇಹಾ ಮಾತನಾಡಿದ್ದಾರೆ. ಪತಿ ಅಂಗದ್ ಬೇಡಿ ಗರ್ಭಧಾರಣೆಯ ಆರಂಭಿಕ ತಿಂಗಳಲ್ಲಿ ಕೊರೊನಾಗೆ ತುತ್ತಾದರು. ಈ ಸಂದರ್ಭದಲ್ಲಿ ಸಂಕಷ್ಟ ಅನುಭವಿಸಿದೆ ಎಂದು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.