ಕರ್ನಾಟಕ

karnataka

ETV Bharat / sitara

ಯಶ್​ ಜತೆ ಕುಣಿದ ಬಾಲಿವುಡ್​ ನಟಿಗೆ ಆಘಾತ! - ನಟಿ

ಬಾಲಿವುಡ್​ ನಟಿ ಮೋನಿ ರಾಯ್​ಗೆ 'ಬೋಲೆ ಚೂಡಿಯಾನ್' ಚಿತ್ರದಿಂದ ಗೆಟ್​ಪಾಸ್​ ಸಿಕ್ಕಿದೆ. ನಾಯಕಿ ಪಾತ್ರದಿಂದ ಚಿತ್ರತಂಡ ಈ ಗ್ಲಾಮರ್​ ಗೊಂಬೆಯನ್ನು ಕೈ ಬಿಟ್ಟಿದೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Jun 1, 2019, 7:56 PM IST

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೋನಿ, ಅಕ್ಷಯ್ ಕುಮಾರ್ ಅವರ 'ಗೋಲ್ಡ್' ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಇದಾದ ನಂತರ ನವಾಜುದ್ದೀನ್​ ಸಿದ್ಧಕಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ಬೋಲೆ ಚೂಡಿಯಾನ್​' ಸಿನಿಮಾಗೆ ನಾಯಕಿಯಾಗುವ ಅವಕಾಶ ಪಡೆದುಕೊಂಡ್ರು. ಆದರೆ, ಇದೀಗ ಚಿತ್ರತಂಡ ಈಕೆಗೆ ಕೊಕ್​ ನೀಡಿದೆ. ಮೋನಿಗೆ ವೃತ್ತಿಪರತೆಯಿಲ್ಲ ಹಾಗೂ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ನಿರ್ಮಾಪಕ ರಾಜೇಶ್ ಭಾಟಿಯಾ ಆರೋಪಿಸಿ, ತಮ್ಮ ಚಿತ್ರದಿಂದ ಹೊರಹಾಕಿದ್ದಾರೆ.

ರಾಜೇಶ್ ಮಾಡಿರುವ ಆರೋಪವನ್ನು ಮೋನಿರಾಯ್​ ಅವರ ವಕ್ತಾರ ಅಲ್ಲಗಳೆದಿದ್ದಾರೆ. ಅಷ್ಟೇ ಅಲ್ಲದೇ ರಾಜೇಶ್ ಅವರ ಮೇಲೆಯೇ ಮರು ಆರೋಪ ಮಾಡಿ ಅವರಿಗೆನೇ ವೃತ್ತಿಪರತೆಯ ಕೊರತೆ ಇದೆ ಆಪಾದಿಸಿದ್ದಾರೆ.

ಮೋನಿರಾಯ್ ಕನ್ನಡ ನಟ ಯಶ್ ಅವರ 'ಕೆಜಿಎಫ್' ಚಿತ್ರದ ಹಿಂದಿ ಅವತರಣೆಯ 'ಗಲಿ ಗಲಿ' ಐಟಂ ಸಾಂಗ್​​ವೊಂದಕ್ಕೆ ಹೆಜ್ಜೆ ಹಾಕಿದ್ದರು. ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರದ ಬ್ಲಾಕ್​ಬಸ್ಟರ್​ ಆಗಿದೆ.

ABOUT THE AUTHOR

...view details